ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ 158ನೇ ಜನ್ಮದಿನಾಚರಣೆ

Bhagyavan Sanil

ಮೂಲ್ಕಿ: ಶ್ರೀ ನಾರಾಯಣ ಗುರುಗಳ ತತ್ವಗಳು ಇಂದಿನ ದಿನಗಳಲ್ಲಿ ಯುವ ಪೀಳಿಗೆಯ ಉದ್ದಾರಕ್ಕೆ ಅವಶ್ಯವಾಗಿದ್ದು ಅದನ್ನು ತಿಳಿಸುವ ಕೆಲಸ ಸಮಾಜದಿಂದ ನಡೆಯಬೇಕು ಎಂದು ಜಿ.ಪಂ.ಸದಸ್ಯೆ ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯವರ 158 ನೇ ಜನ್ಮದಿನಾಚರಣೆಯ ಪ್ರಯುಕ್ತ ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕೆ.ಎಸ್ ರಾವ್ ನಗರ. ಮುಲ್ಕಿ. ಇದರ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ ಹಾಗೂ ಅವರ ಪತ್ನಿ ಕುಸುಮ ಮಹಾಬಲ ಪೂಜಾರಿ ಇವರು “ ಭಜನಾ ಜ್ಯೋತಿ ” ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ನಪಂ.ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಂಗಾದರ ಸುವರ್ಣ ದಯಾನಂದ ಹೆಜಮಾಡಿ. ಬಾಲಚಂದ್ರ ಸನಿಲ್ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಶ್ರೀ ರಾಘವ ಸುವರ್ಣರವರು ಪ್ರಾಸ್ಥವಿಕ ಭಾಷಣ ಮಾಡಿದರು, ಜನಾರ್ಧನ ಬಂಗೇರರವರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಹರಿಶ್ಚಂದ್ರ ಕೋಟ್ಯಾನ್ ರವರು ವಂದನಾರ್ಪಣೆ ಮಾಡಿದರು. ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.

Comments

comments

Leave a Reply

Read previous post:
ಮೂಲ್ಕಿ ಶಾಖೆಯ 56ನೇ ವಿಮಾ ಸಪ್ತಾಹ ಉದ್ಘಾಟಣೆ

Bhagyavan Sanil ಮೂಲ್ಕಿ: ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲಿ ಅತೀಹೆಚ್ಚು ಜನ ಮನ್ನಣೆ ಪಡೆದ ಸಂಸ್ಥೆಯಾಗಿದ್ದು ಸಮಾಜಕ್ಕೆ ಸಹಕಾರಿಯಾಗಿ ಮೂಡಿಬಂದಿದೆ ಎಂದು ಉದ್ಯಮಿ ಕೆ.ಸಿ.ಮಿರಾಂದಾ ಹೇಳಿದರು....

Close