ಕಿನ್ನಿಗೋಳಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಸೌತ್ ಕೆನರಾ ಫಟೊಗ್ರಾಫರ್ ಅಸೋಸಿಯೇಶನ್ (ರಿ.) ಮೂಲ್ಕಿ ವಲಯ, ಕಲ್ಕೂರ ಪ್ರತಿಷ್ಠಾನ, ಮಂಗಳೂರು ಹಾಗೂ ಯುಗಪುರುಷ, ಕಿನ್ನಿಗೋಳಿ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 8-9-2012ನೇ ಶನಿವಾರ ಬೆಳಿಗ್ಗೆ ಗಂಟೆ 9.00ಕ್ಕೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಿನ್ನಿಗೋಳಿ ಕರ್ನಾಟಕ ಬ್ಯಾಂಕ್ ಶಾಖಾಧಿಕಾರಿ ಶ್ರೀ ಸದಾನಂದ ಎಂ. ನೆರವೇರಿಸಲಿದ್ದಾರೆ.
ಬಹುಮಾನ ವಿತರಣೆ ಸಮಾರಂಭದಲ್ಲಿ ವಲಯ-3 ರ ಸಹಾಯಕ ಗವರ್ನರ್ ಮನೋಹರ ರಾವ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್‌ಕುಮಾರ ಕಲ್ಕೂರ, ಭಾಗವಹಿಸಲಿದ್ದಾರೆ. ಸ್ಪರ್ಧೆಯು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಬೆಳಿಗ್ಗೆ ಗಂಟೆ ೮ಕ್ಕೆ ಸರಿಯಾಗಿ ಯುಗಪುರುಷ ಸಭಾಭವನದಲ್ಲಿ ಹಾಜರಾಗತಕ್ಕದ್ದು ಎಂದು ಸಂಘಟಕರು ತಿಳಿಸಿದ್ದಾರೆ.

Comments

comments

Leave a Reply

Read previous post:
ತೋಕೂರು ತಪೋವನ ಶಿಕ್ಷಕರ ದಿನಾಚರಣೆ

ತಪೋವನ ತೋಕೂರು, ಮುಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನಲ್ಲಿ ಎನ್.ಎಸ್.ಎಸ್. ಹಾಗೂ ರೋವರ್ಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಬುಧವಾರ ದಂದು ಆಚರಿಸಲಾಯಿತು. ಸಂಸ್ಥೆಯ ತರಬೇತಿ ಅಧಿಕಾರಿ ರಘುರಾಮ...

Close