ತೋಕೂರು ತಪೋವನ ಶಿಕ್ಷಕರ ದಿನಾಚರಣೆ

ತಪೋವನ ತೋಕೂರು, ಮುಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನಲ್ಲಿ ಎನ್.ಎಸ್.ಎಸ್. ಹಾಗೂ ರೋವರ್ಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಬುಧವಾರ ದಂದು ಆಚರಿಸಲಾಯಿತು. ಸಂಸ್ಥೆಯ ತರಬೇತಿ ಅಧಿಕಾರಿ ರಘುರಾಮ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅತಿಥಿಯಾಗಿ ನಿವೃತ್ತ ಪ್ರಾಚಾರ್ಯ ತಡಂಬೈಲ್- ಸುರತ್ಕಲ್ ರಾಮಕೃಷ್ಣ ಹೆಬ್ಬಾರ್ “ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರ ಮೇಲೆ ಅಪಾರ ಗೌರವವನ್ನು ಇಟ್ಟು ಅವರಲ್ಲಿರುವ ಎಲ್ಲ ವಿದ್ಯೆಗಳನ್ನು ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಯಾವತ್ತೂ ಕಲಿಸಿದ ಗುರುವನ್ನು ಮರೆಯದೆ ಅವರು ತಿಳಿಸಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಭವಿಷ್ಯ ಸಾಧ್ಯ ಎಂದು ತಮ್ಮ ಅತಿಥಿ ಮಾತಿನಲ್ಲಿ ಹೇಳಿದರು”.
ತರಬೇತಿ ಅಧಿಕಾರಿ ರಘುರಾಮ್ ರಾವ್, ರೋವರ್ ಲೀಡರ್ ಸುರೇಶ್ ಎಸ್. ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಮಕೃಷ್ಣ ಹೆಬ್ಬಾರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಿಕ್ಷಕರ ಪರವಾಗಿ ವಿಶ್ವನಾಥ್ ರಾವ್ , ದಯಾನಂದ ಲಾಗ್ವಾಣ್‌ಕರ್ ಮಕ್ಕಳಿಗಾಗಿ ಹಿತವಚನವನ್ನು ನೀಡಿದರು. ವಿದ್ಯಾರ್ಥಿಗಳು ಡಾ | ರಾಧಾಕೃಷ್ಣನ್ ಇವರ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವಿದ್ಯರ್ಥಿಗಳೇ ನಡೆಸಿಕೊಟ್ಟ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Comments

comments

Leave a Reply

Read previous post:
ಹಾಸ್ಯನಟ ಸುಧಾಕರ್ ಸಾಲ್ಯಾನ್‌ರಿಗೆ ಸನ್ಮಾನ

ಕಿನ್ನಿಗೋಳಿ: ರಂಗಭೂಮಿ ಹಾಸ್ಯ ನಟ, ನಾಟಕಕಾರ, ಸಮಾಜ ಸೇವಕ, ಸಾಧಕ ಸುಧಾಕರ ಸಾಲ್ಯಾನ್ ಸಂಕಲಕರಿಯ ಅವರನ್ನು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ವತಿಯಿಂದ ಮೂರುಕಾವೇರಿಯಲ್ಲಿ ಸನ್ಮಾನಿಸಲಾಯಿತು. ರೋಟರಾಕ್ಟ್ ಸಭಾಪತಿ ಜೆರಾಲ್ಡ್ ಮಿನೇಜಸ್, ಕೆ.ಬಿ....

Close