ಯುಗಪುರುಷ ಪ್ರಕಟಣಾಲಯದ ಕೃತಿ ಶ್ರೀ ವೇಂಕಟೇಶ ಮಹಾತ್ಮೆ ಬಿಡುಗಡೆ

Yugapurusha
ಕಿನ್ನಿಗೋಳಿ : ಹತ್ತು ಕಡೆಯಿಂದ ಉತ್ತಮ ವಿಚಾರಗಳು ದೊರೆತಾಗ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ. ತುಳು ಭಾಷೆ, ಸಾಹಿತ್ಯವೂ ಅದಕ್ಕೆ ಹೊರತಲ್ಲ. ತುಳು ಭಾಷೆಯ ಸಾಹಿತ್ಯಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸುವ, ಇತರ ಭಾಷೆಗಳ ಕೃತಿಗಳನ್ನು ತುಳುವಿಗೆ ತರುವ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆಯಲೇಬೇಕಾಗಿದೆ ಎಂದು ಜಾನಪದ ವಿದ್ವಾಂಸ ವಾಮನ ನಂದಾವರ ಹೇಳಿದ್ದಾರೆ.
ಅವರು ಶುಕ್ರವಾರ ಮಂಗಳೂರು ತುಳು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆದ ಬಿ.ಕೆ.ಶ್ರೀಮತಿ ರಾವ್ ಅವರ ಶ್ರೀ ವೇಂಕಟೇಶ ಮಹಾತ್ಮೆ ತುಳು ಪೌರಾಣಿಕ ಕೃತಿ ಬಿಡುಗಡೆ ಸಮಾರಂಭದಲ್ಲಿ ತುಳು ಲೇಖಕರು, ಸಾಹಿತಿಗಳು ಪ್ರಕಾಶಕರನ್ನು ಕರೆಸಿಕೊಂಡು ಜೋಳಿಗೆಯಲ್ಲಿ ತುಳು ಪುಸ್ತಕವನ್ನು ಹೊತ್ತು ಮನೆ, ಮನೆಗೆ ಸಾಗಿಸಿ ಮಾರಾಟ ಮಾಡುವ ಕೆಲಸವನ್ನು ಅಕಾಡೆಮಿ ಮಾಡಿದರೆ ಮಾತ್ರ ತುಳು ಸಾಹಿತ್ಯದ ಕಂಪು ಒಂದಿಷ್ಟು ಕಡೆಗಳಲ್ಲಿ ಪ್ರಸಾರವಾಗಲು ಸಾಧ್ಯ ಎಂದರು.
ಪುಸ್ತಕ ಬಿಡುಗಡೆಗೊಳಿಸಿದ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ ತುಳು ಸಾಹಿತ್ಯ ಕೃತಿಗಳ ಪ್ರಕಟಣೆ ಸಹಿತ ಇತರ ಪ್ರಯತ್ನಗಳಿಗೆ ಅಕಾಡೆಮಿಯ ಬೆಂಬಲ ಸದಾ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಶ್ರೀಮತಿ ರಾವ್ ಅವರಂತಹ ಪ್ರತಿಭಾವಂತ ಹರಿದಾಸ ಪರಂಪರೆಯ ಮಂದಿಯನ್ನು ಸಾಹಿತಿಗಳನ್ನು ತುಳು ಸಾಹಿತ್ಯ ಲೋಕ ಇನ್ನೂ ಗುರುತಿಸಿಲ್ಲ ಎಂದರು.
ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅವರು ತಮ್ಮ ಸಂಸ್ಥೆಯ ೪೮೬ನೇ ಪ್ರಕಟಣೆ ಇದು ಎಂದರು. ಲೇಖಕಿ ಶ್ರೀಮತಿ ರಾವ್ ಅವರು ತಮ್ಮ ಕೃತಿ ರಚನೆಯ ಪ್ರೇರಣೆಗಳನ್ನು ವಿವರಿಸಿದ್ದಲ್ಲದೆ, ಕೃತಿಯ ಕೊನೆಯಲ್ಲಿ ತಾವು ರಚಿಸಿದ ಶ್ರೀನಿವಾಸ ಕಲ್ಯಾಣ ಪಾರ್ದನ ಹಾಡಿ ರಂಜಿಸಿದರು. ಅವರನ್ನು ಯುಗಪುರುಷ ಪ್ರಕಟಣಾಲಯದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಾಪಕ ಸುದಾಕರ ರಾವ್ ಪೇಜಾವರ, ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ ಇರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಕಿನ್ನಿಗೋಳಿ ಇಗರ್ಜಿಯಲ್ಲಿ ತೆನೆ ಹಬ್ಬ

Jerry Kinnigoli ಕ್ರೈಸ್ತರ ತೆನೆ ಹಬ್ಬ, ಕನ್ಯಾಮರಿಯಮ್ಮರವರ ಜನ್ಮದಿನದ ಪ್ರಯುಕ್ತ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ಧರ್ಮ ಗುರುಗಳಾದ ರೆ.ಫಾ....

Close