ಕೆಥೋಲಿಕ್ ಸಭಾ – ಶಿಕ್ಷಕರ ದಿನಾಚರಣೆ

 Lionel Pinto Kinnigoli
ಕಿನ್ನಿಗೋಳಿ : ಕಿನ್ನಿಗೋಳಿ ಕೆಥೋಲಿಕ್ ಸಭಾದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಿನ್ನಿಗೋಳಿ ಕೆಥೋಲಿಕ್ ಸಭಾದ ಅಧ್ಯಕ್ಷ ಆಂಡ್ರ್ಯೂ ಪಿಂಟೊ ಅಧ್ಯಕ್ಷತೆಯನ್ನು ವಹಿಸಿದ್ದರು. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ ಮುಖ್ಯ ಅತಿಥಿಗಳಾಗಿ ಭಾಗವಹಿಸರು. ವಿನ್ಸೆಂಟ್ ಡಿಕೋಸ್ಟ ಪ್ರಧಾನ ಉಪನ್ಯಾಸವಿತ್ತರು.

32 ವರ್ಷ ಸೇವೆ ಸಲ್ಲಿಸಿದ ಕ್ಯಾಥರಿನ್ ಡಿಸೋಜ ಮತ್ತು 35 ವರ್ಷ ಸೇವೆಗೈದ ಮಾಗ್ದಲಿನ್ ಡಿಸೋಜರನ್ನು ಸನ್ಮಾನಿಸಲಾಯಿತು. ಆಂಡ್ರ್ಯೂ ಪಿಂಟೊ ಸ್ವಾಗತಿಸಿ, ಮೇಬಲ್ ಡಿಸೋಜ ವಂದಿಸಿದರು. ಲಾಯ್ನಲ್ ಪಿಂಟೊ ಹಾಗೂ ರಫಾಯಲ್ ರೆಬೆಲ್ಲೊ ಸನ್ಮಾನಿತರನ್ನು  ಪರಿಚಯಿಸಿದರು ಸುಮಾರು 55 ಶಿಕ್ಷಕರು  ಸಮಾರಂಭದಲ್ಲಿ ಹಾಜರಿದ್ದರು

Comments

comments

Leave a Reply

Read previous post:
ಯುಗಪುರುಷ ಪ್ರಕಟಣಾಲಯದ ಕೃತಿ ಶ್ರೀ ವೇಂಕಟೇಶ ಮಹಾತ್ಮೆ ಬಿಡುಗಡೆ

Yugapurusha ಕಿನ್ನಿಗೋಳಿ : ಹತ್ತು ಕಡೆಯಿಂದ ಉತ್ತಮ ವಿಚಾರಗಳು ದೊರೆತಾಗ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ. ತುಳು ಭಾಷೆ, ಸಾಹಿತ್ಯವೂ ಅದಕ್ಕೆ ಹೊರತಲ್ಲ. ತುಳು ಭಾಷೆಯ ಸಾಹಿತ್ಯಗಳನ್ನು ಇತರ...

Close