ಪ್ರಕಾಶನದಿಂದ ಪಳಕಳರಿಗೆ ಸನ್ಮಾನ-ಕೃತಿ ಬಿಡುಗಡೆ

ಕಿನ್ನಿಗೋಳಿ: “ನಾನು ಪ್ರಸಿದ್ಧಿಗೆ ಬಂದ ಬಳಿಕ ಹಲವು ಪ್ರಕಾಶಕರು ನನ್ನ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದಿದ್ದಾರೆ. ಯಾವುದೇ ಪ್ರಸಿದ್ಧಿ ಇಲ್ಲದ ಸಮಯದಲ್ಲಿ ನನ್ನ ಕೃತಿಗಳನ್ನು ನಿರಂತರವಾಗಿ ಪ್ರಕಟಿಸಿರುವ ಯುಗಪುರುಷದ ಪ್ರೋತ್ಸಾಹವೇ ನಾನು ಈ ಸ್ಥಾನಕ್ಕೆಬರಲು ಸಾಧ್ಯವಾಗಿದೆ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಪುರಸ್ಕೃತ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ಹೇಳಿದರು.
ಯುಗಪುರುಷದ ವತಿಯಿಂದ ಪಳಕಳ ಅವರ ಪುತ್ರ ರಘುಪತಿಭಟ್ ಅವರ ಮನೆಯಲ್ಲಿ ಶುಕ್ರವಾರ ನಡೆದ ಪಳಕಳಅವರ ಯುಗಪುರುಷ ಪ್ರಕಟಿತ 90ನೇ ಕೃತಿ ‘ಭಾರತರತ್ನ’ ಬಿಡುಗಡೆ ಹಾಗೂ ಯುಗಪುರುಷದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕ.ಸಾ.ಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿ ಪಳಕಳ ಅವರನ್ನು ಸನ್ಮಾನಿಸಿದ ಅವರು “ಪಳಕಳ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದ ಕೃತಿಗಳನ್ನು ರಚಿಸಿದ್ದಾರೆ. ಶಿಶುಸಾಹಿತ್ಯದಲ್ಲಿ ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿರುವ ಪಳಕಳ ಅವರನ್ನು ಅಕಾಡೆಮಿ ಗುರುತಿಸಿರುವುದು ಶ್ಲಾಘನೀಯ. ಯುಗಪುರುಷದಿಂದ ಅವರ ನೂರನೇ ಕೃತಿ ಪ್ರಕಟವಾದಲ್ಲಿ ಅದರ ಸಂಪೂರ್ಣ ವೆಚ್ಚ ಭರಿಸುವುದಾಗಿ” ಅವರು ಹೇಳಿದರು.

ಯುಗಪುರುಷದ ಪ್ರಕಾಶಕ ಭುವನಾಭಿರಾಮ ಉಡುಪ ಮಾತನಾಡಿ ಸೀತಾರಾಮ ಭಟ್ ಅವರ ಕೃತಿಯನ್ನು ನನ್ನ ತಂದೆ ಕೊ.ಅ.ಉಡುಪ ಪ್ರಕಟಿಸುತ್ತಾ ಬಂದಿದ್ದು ನೂರು ಕೃತಿಗಳನ್ನು ಪ್ರಕಟಿಸುವ ಭರವಸೆ ನೀಡಿದ್ದರು. ಅದನ್ನು ಈಡೇರಿಸುವುದಾಗಿ ಹೇಳಿದ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಸಂದ ಗೌರವ ಯುಗಪುರುಷಕ್ಕೂ ಸಂದಗೌರವವಾಗಿದೆ ಎಂದರು. ಸಾಹಿತಿ ಕೆ.ಜಿ.ಮಲ್ಯ, ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆ, ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್, ಪಳಕಳ ಅವರ ಪತ್ನಿ , ಪುತ್ರ ರಘುಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ನಿರ್ವಹಿಸಿದರು.

Comments

comments

Leave a Reply

Read previous post:
ಪುನರೂರಿನಲ್ಲಿ ಮೊಸರು ಕುಡಿಕೆ

ಕಿನ್ನಿಗೋಳಿ : ನಂದಿ ಪ್ರೆಂಡ್ಸ್ ಪುನರೂರು ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಭಾನುವಾರದಂದು ನಡೆಯಿತು. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ ವಿಜೃಂಭಣೆಯಿಂದ...

Close