ಕಿನ್ನಿಗೋಳಿ ಸೆಲ್ ಫಿಲ್ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಅನುದಾನದ ರಾಜ್ಯ ಸರಕಾರದ ಗ್ರಾಮೀಣ ಇಲಾಖೆಯ ಅನುಷ್ಠಾನದಿಂದ ಸೆಲ್ ಫಿಲ್ ಕಾಂಕ್ರೀಟ್ ರಸ್ತೆಯ ಪ್ರಾಯೋಗಿಕ ಪೈಲಟ್ ಯೋಜನೆಯಡಿ ನಿರ್ಮಾಣಗೊಂಡ 151.34 ಲಕ್ಷ ವೆಚ್ಚದ ಕಿನ್ನಿಗೋಳಿ- ಗುತ್ತಕಾಡು ರಸ್ತೆ (ಶಾಂತಿನಗರ ಟಿ-04) ಮತ್ತು 112.11೧ ಲಕ್ಷ ವೆಚ್ಚದ ಕಿನ್ನಿಗೋಳಿ- ಗೋಳಿಜಾರ (ಪೆರ್ನಂಕಿಲ ಎಲ್-178) ರಸ್ತೆಗಳನ್ನು ಮಂಗಳವಾರ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಸಿ.ಟಿ. ರವಿ ಹಾಗೂ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಉದ್ಘಾಟಿಸಿದರು.
ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ| ವಿಜಯಪ್ರಕಾಶ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮನಾಥ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಆಶಾ ಆರ್ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಬೇಬಿ ಸುಂದರ ಕೋಟ್ಯಾನ್, ವಜ್ರಾಕ್ಷಿ ಶೆಟ್ಟಿ, ವಿನೋದ್ ಸಾಲ್ಯಾನ್, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತ, ಸಂತಾನ್ ಡಿಸೋಜ, ಜಾನ್ಸನ್ ಡಿಸೋಜ, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಸತೀಶ್ ಭಟ್ ಕೊಳುವೈಲು,ಗುತ್ತಿಗೆದಾರ ಸುಧಾಕರ ಶೆಟ್ಟಿ ಮುಗ್ರೋಡಿ ಹಾಗೂ ಕಿನ್ನಿಗೋಳಿ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಕಿನ್ನಿಗೋಳಿ- ಗುತ್ತಕಾಡು ರಸ್ತೆಯಲ್ಲಿ 2 ಕಿ.ಮಿ. ಉದ್ದದ ಸಿಮೆಂಟ್ ಕಾಂಕ್ರೀಟ್ ರಸ್ತೆ , 1.20 ಡಾಮಾರು ರಸ್ತೆ ಮತ್ತು640  ಮೀಟರ್ ಚರಂಡಿ ಹಾಗೂ ಕಿನ್ನಿಗೋಳಿ- ಗೋಳಿಜಾರ ರಸ್ತೆಯಲ್ಲಿ 2.20 ಕಿ.ಮೀ ಉದ್ದದ ಸಿಮೆಂಟ್ ಕಾಂಕ್ರೀಟ್ ರಸ್ತೆ 440 ಮೀಟರ್ ಚರಂಡಿ ನಿರ್ಮಾಣಗೊಂಡಿದೆ.

Comments

comments

Leave a Reply

Read previous post:
ಪ್ರಕಾಶನದಿಂದ ಪಳಕಳರಿಗೆ ಸನ್ಮಾನ-ಕೃತಿ ಬಿಡುಗಡೆ

ಕಿನ್ನಿಗೋಳಿ: "ನಾನು ಪ್ರಸಿದ್ಧಿಗೆ ಬಂದ ಬಳಿಕ ಹಲವು ಪ್ರಕಾಶಕರು ನನ್ನ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದಿದ್ದಾರೆ. ಯಾವುದೇ ಪ್ರಸಿದ್ಧಿ ಇಲ್ಲದ ಸಮಯದಲ್ಲಿ ನನ್ನ ಕೃತಿಗಳನ್ನು ನಿರಂತರವಾಗಿ ಪ್ರಕಟಿಸಿರುವ ಯುಗಪುರುಷದ...

Close