ರೋಟರಿ ಶಾಲೆಯಲ್ಲಿ ದಂತ ತಪಾಸಣೆ

Sumith
ಕಿನ್ನಿಗೋಳಿ: ರೋಟರಾಕ್ಟ್ ಸಂಸ್ಥೆ, ಇನ್ನರ್ ವೀಲ್ ಸಂಸ್ಥೆ, ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವೈದ್ಯ ಕಾಲೇಜಿನ ತಜ್ಞ ವೈದ್ಯರಿಂದ ರೋಟರಿ ಶಾಲೆ ಮೂರುಕಾವೇರಿಯಲ್ಲಿ ದಂತ ತಪಾಸಣಾ ಶಿಬಿರ ನಡೆಯಿತು. ಡಾ| ಆಡ್ರಿ ಡಿಕ್ರೂಸ್, ಡಾ| ಪ್ರಸಾದ್ ಶೆಟ್ಟಿ ವೈದ್ಯರಾಗಿ ಪಾಲ್ಗೊಂಡಿದ್ದು,
ದಂತ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಶಾಲೆಟ್ ಪಿಂಟೋ ಉದ್ಘಾಟಿಸಿದರು. ರೋಟರಿ ಶಾಲಾ ಕಾರ್ಯದರ್ಶಿ ಸತೀಶ್ ರಾವ್, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಜೆರಾಲ್ಡ್ ಮಿನೇಜೆಸ್, ಶಾಲಾ ಮುಖ್ಯೋಪಾಧ್ಯಾಯರಾದ ಗಿಲ್ಬರ್ಟ್ ಡಿ’ಸೋಜಾ, ಸಿಂತಿಯಾ ಕುಟಿನ್ಹಾ, ಸುಧಾ ವೇದವ್ಯಾಸ ಉಡುಪ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ರಾಷ್ಟ್ರಮಟ್ಟ ಕರಾಟೆ-ಪ್ರತೀಕ್ಷಾ ಹೆಜಮಾಡಿ ಆಯ್ಕೆ

Narendra Kerekad ಮೂಲ್ಕಿ: ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯೋಜನೆಯಲ್ಲಿ ಕಿನ್ನಿಗೋಳಿಯಲ್ಲಿ ಇತ್ತೀಚೆಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀ...

Close