ಗಿಡಿಗೆರೆಯಲ್ಲಿ ಮುದ್ದು ಕೃಷ್ಣ

ಕಿನ್ನಿಗೋಳಿ: ಕಟೀಲು ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ, ಗಿಡಿಗೆರೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ದುರ್ಗಾಂಬಿಕಾ ಯುವಕ ಮಂಡಲದ 35ನೇ ವರ್ಷಾಚರಣೆಯ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.
ಕಟೀಲು ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಸುರೇಶ್, ಶೋಭಾ ಸುರೇಶ್, ಮುಂಡ್ಕೂರು ಸರ್ವೋದಯ ಪ್ರೌಢ ಶಾಲೆ ಪ್ರಾಧ್ಯಾಪಕ ಗುರು ಎಂ, ಮೆನ್ನಬೆಟ್ಟು ಸೇವಾನಿರತ ದೇವೇಂದ್ರ, ತಿಮ್ಮಪ್ಪ, ಮೋಹಿನಿ, ಲಕ್ಷ್ಮಣ್, ದೊಡ್ಡಯ್ಯ, ಸುಕುಮಾರ್ ಉಪಸ್ಥಿತರಿದ್ದರು.
ಸೌಮ್ಯ ಪ್ರಾರ್ಥಿಸಿ, ಹರೀಶ್ ಸ್ವಾಗತಿಸಿ ಶ್ಯಾಮ ಡಿ ವಂದಿಸಿದರು, ರುಕ್ಮಯ ಕಾರ್ಯಕ್ರಮ ನಿರೂಪಿಸಿದರು, ೨೯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

Comments

comments

Leave a Reply

Read previous post:
ನಿಧನ : ಮುಂಡ್ಕೂರು ದೊಡ್ಡಮನೆ ಪ್ರಶಾಂತ ಶೆಟ್ಟಿ

ಮುಂಡ್ಕೂರು ದೊಡ್ಡಮನೆ ಪ್ರಶಾಂತ ಶೆಟ್ಟಿ (ವಯಸ್ಸು 40) ಬುಧವಾರ ನಿಧನರಾದರು. ಪ್ರಗತಿಪರ ಕೃಷಿಕ ಹಾಗೂ ಹೈನುಗಾರರಾಗಿದ್ದರು. ಸಂಕಲಕರಿಯ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿದ್ದರು ಮೃತರಿಗೆ ಪತ್ನಿ ಪುತ್ರ...

Close