ಮಾರಿಗುಡಿ ಬಳಿ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: 2011-12ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ಅಂದಾಜು ಮೊತ್ತದ ಕಾಂಕ್ರೀಟೀಕರಣ ರಸ್ತೆಯು ಮೂರುಕಾವೇರಿ ಮಾರಿಗುಡಿಯ ಬಳಿ ಪರಿಶಿಷ್ಟ ಕಾಲನಿಯ, ಮೂರುಕಾವೇರಿ- ಮಾರಡ್ಕ-ಕಟೀಲು ಕೂಡು ರಸ್ತೆಯನ್ನು, ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಐಕಳ ಮತ್ತು ಮೆನ್ನಬೆಟ್ಟು ಗ್ರಾ.ಪಂಚಾಯಿತಿಗೆ ಒಳಪಟ್ಟ ಈ ರಸ್ತೆ 5 ಲಕ್ಷದಲ್ಲಿ 200 ಮೀಟರ್ ಕಾಂಕ್ರಿಟ್ ರಸ್ತೆ ಪೂರ್ಣಗೊಂಡಿದೆ. , ಉಳಿದ 150 ಮೀಟರ್ ಡಾಮಾರು ರಸ್ತೆಯನ್ನು ಮೆಳೆಗಾಲದ ಬಳಿಕ ಪೂರ್ಣಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಐಕಳ ಪಂ.ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಸೆವ್ರಿನ್ ಲೋಬೊ, ಹರ್ಬಟ್ ಲೋಬೊ, ಸುಶೀಲಾ ಮೂಲ್ಯ, ಕಿರಣ್, ಕೃಷ್ಣ ಮಾರ್ಲ, ಗುತ್ತಿಗೆದಾರ ಅರುಣ್ ಕುಮಾರ್, ಇಂಜೀನಿಯರ್ ಪ್ರಶಾಂತ್ ಆಳ್ವ, ತಾ.ಪಂ.ಸದಸ್ಯ ನೆಲ್ಸನ್ ಲೋಬೊ, ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಯುವವಾಹಿನಿಯಿಂದ ಚೆನ್ನೈನಲ್ಲಿ ತುಳುನಾಡ ವೈಭವ

Narendra Kerekadu ಮುಲ್ಕಿ : ಮುಲ್ಕಿ ಯುವವಾಹಿನಿ ಸಂಸ್ಥೆಯು ಸೆಪ್ಟಂಬರ್ 16ರಂದು ಭಾನುವಾರ ಚೆನ್ನೈನಲ್ಲಿ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಮಿಳುನಾಡಿನ ಕರ್ನಾಟಕ ಸಂಘ ಮತ್ತು ದಕ್ಷಿಣ...

Close