ಯುವವಾಹಿನಿಯಿಂದ ಚೆನ್ನೈನಲ್ಲಿ ತುಳುನಾಡ ವೈಭವ

Narendra Kerekadu
ಮುಲ್ಕಿ : ಮುಲ್ಕಿ ಯುವವಾಹಿನಿ ಸಂಸ್ಥೆಯು ಸೆಪ್ಟಂಬರ್ 16ರಂದು ಭಾನುವಾರ ಚೆನ್ನೈನಲ್ಲಿ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ತಮಿಳುನಾಡಿನ ಕರ್ನಾಟಕ ಸಂಘ ಮತ್ತು ದಕ್ಷಿಣ ಭಾರತದ ದ್ರಾವೀಡ ಬ್ರಾಹ್ಮಣರ ಸಂಘದ ಜಂಟಿ ಸಂಯೋಜನೆಯಲ್ಲಿ ನಡೆಯಲಿರುವ ಈ ತುಳುನಾಡಿನ ವಿಶೇಷ ಕಾರ್ಯಕ್ರಮವನ್ನು ತುಳುನಾಡ ಸಂಸ್ಕೃತಿ, ಸಂಸ್ಕಾರ, ಭಾಷೆ ಎನ್ನುವ ಕಾರ್ಯಕ್ರಮವನ್ನು ಸಂಯೋಜಿಸಲಾಗಿದ್ದು ಚೆನ್ನೈನ ಟಿ.ನಗರದ ಕರ್ನಾಟಕ ಸಂಘದಲ್ಲಿ ಡಾ.ರಾಮರಾವ್ ಕಲಾಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಆಟಿಡೊಂಜಿ ದಿನ, ತುಳುವೆರೆ ತುಡರ ಪರ್ಬ, ತುಳುನಾಡ ವೈಭವದ ಕಾರ್ಯಕ್ರಮದ ಮೂಲಕ ತುಳು ಭಾಷೆ, ಸಂಸ್ಕೃತಿಯ ವಿವಿಧ ಕಾರ್ಯಕ್ರಮದ ಮೂಲಕ ಗಮನ ಸೆಳೆದಿರುವ ಮುಲ್ಕಿ ಯುವವಾಹಿನಿ ಸಂಸ್ಥೆಯು ಚೆನ್ನೈನಲ್ಲಿ ನೀಡಲಿರುವ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಮುಲ್ಕಿ ಚಂದ್ರಶೇಖರ ಸುವರ್ಣ ನಿರ್ದೇಶಿಸಿದ್ದು ಎರಡು ತಾಸಿನಲ್ಲಿ 70 ಜನ ಕಲಾವಿದರು, 500ಕ್ಕೂ ಹೆಚ್ಚು ಪಾತ್ರಗಳ ಮೂಲಕ ತುಳುನಾಡಿನ ಚಿತ್ರಣವನ್ನು ಯಶಸ್ವಿ 130ನೇ ಪ್ರದರ್ಶನದ ಮೂಲಕ ನೀಡಲಿದೆ ಎಂದು ಯುವವಾಹಿನಿ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಟಿ.ಕೋಟ್ಯಾನ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Comments

comments

Leave a Reply

Read previous post:
ಕತ್ತಲ್‌ಸಾರ್, ಚಿಗುರು ಕಾರ್ಯಕ್ರಮ

Mithun Kodethoor ಕಟೀಲು : ಕಲೆಯಲ್ಲಿ ಆಸಕ್ತಿ ತೋರಿಸುವ ಮಕ್ಕಳನ್ನು ಪ್ರೋತ್ಸಾಹಿಸುವುದು ಮುಖ್ಯ ಎಂದು ಕತ್ತಲ್‌ಸಾರ್ ದೇಗುಲದ ಅರ್ಚಕ ಬಾಲಕೃಷ್ಣ ಉಡುಪ ಹೇಳಿದರು. ಅವರು ಕತ್ತಲ್‌ಸಾರ್ ವಿಷ್ಣುಮೂರ್ತಿ...

Close