ಏಕಾಗ್ರತೆಯಿಂದ ಸಾಧನೆ ಗೈದರೆ ಮಾತ್ರ ಯಶಸ್ಸು ಸಾಧ್ಯ

Bhagyavan Sanil

ಮೂಲ್ಕಿ: ಜೀವನದ ಉನ್ನತಿಗಾಗಿ ಆರಿಸಿದ ಗುರಿಯನ್ನು ಏಕಾಗ್ರತೆಯಿಂದ ಸಾಧನೆ ಗೈದರೆ ಮಾತ್ರ ಯಶಸ್ಸು ಸಾಧ್ಯ ಎಂದು ಮಣಿಪಾಲ ಎಂ.ಐ.ಟಿ.ಯ ಡಾ|ಬಾಲಕೃಷ್ಣ ಹೇಳಿದರು. ಮೂಲ್ಕಿ ವಿಜಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಜೀವನ ಮಾರ್ಗದರ್ಶನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳು 10ನೇ ತರಗತಿಯಲ್ಲಿರುವಾಗಲೇ ಮುಂದಿನ ಯೋಜನೆಗಳನ್ನು ಹಾಕಿಕೊಂಡು ಪಿಯುಸಿಯಲ್ಲಿ ಕಾರ್ಯತತ್ಪರರಾಗಿ ಗುರಿ ಸಾಧಿಸಬೇಕು ಎಂದ ಅವರು ಜೀವನದಲ್ಲಿ ಗುರಿ ಇದ್ದಾಗ ಮಾತ್ರ ಯಶಸ್ಸನ್ನು ಸಾಧಿಸಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಕೆ.ಆರ್.ಶಂಕರ್ ವಹಿಸಿದ್ದು ಪದವಿ ಪೂರ್ವ ಪ್ರಾಂಶುಪಾಲರಾದ ಪ್ರೊ|ಪಮೀದಾ ಬೇಗಂ ಉಪಸ್ಥಿತರಿದ್ದರು. ವಿಜೇತ ಸ್ವಾಗತಿಸಿದರು.ಶಾಂತಲ ವಂದರ್ನಾಪಣೆಗೈದರು.

Comments

comments

Leave a Reply

Read previous post:
ಪ್ರಕೃತಿಯ ವೈಚಿತ್ರ್ಯ,,,,,!!!!!!!!!!

      ಬಾಳೆಗಿಡ ಒಂದು ಅವಸರದಲ್ಲಿ ಗಿಡದ ಮದ್ಯ ಭಾಗದಲ್ಲಿಯೇ ಗೊನೆ ಹಾಕಿದ್ದು... ಇದನ್ನು ಸಚ್ಚರಿಪೇಟೆಯ "ಶಾಂಭವೀ ಸ್ಟುಡಿಯೋ ಮಾಲಕರಾದ ಅಶೋಕ್ ರವರು ತಮ್ಮ ಕ್ಯಾಮರದಲ್ಲಿ...

Close