ಹರಿಕಾರ ಡಾ| ಎಂ.ರಾಯಪ್ಪ ಕಾಮತ್ ಸಂಸ್ಮರಣೆ

Bhagyavan Sanil

ಮೂಲ್ಕಿ:ಅಂದಿನ ದಿನಗಳ ನಿಯಮಿತ ಸೌಲಭ್ಯದೊಂದಿಗೆ ಗ್ರಾಮೀಣ ಬಡಜನರಿಗೆ ಉತ್ತಮ ಸೇವೆಯನ್ನು ನೀಡಿ ಜನ ಮನ್ನಣೆ ಪಡೆದ ಡಾ|ಎಂ.ರಾಯಪ್ಪ ಕಾಮತ್ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಐ.ಎಂ.ಎ ಮೂಲ್ಕಿ ಘಟಕದ ಪೂರ್ವಾಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ ಹೇಳಿದರು.
ಅವರು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಐ.ಎಂ.ಎ ಮೂಲ್ಕಿ ಘಟಕದ ಆಶ್ರಯದಲ್ಲಿ ಮೂಲ್ಕಿ ಪ್ರಗತಿಯ ಹರಿಕಾರ ಡಾ| ಎಂ.ರಾಯಪ್ಪ ಕಾಮತ್ ಸಂಸ್ಮರಣಾ ಭಾಷಣ ಕಾರ್ಯಕ್ರಮದಲ್ಲಿ ರಾಯಪ್ಪ ಕಾಮತ್‌ರವರ ಬಗ್ಗೆ ತಿಳಿಸಿದರು.
ಮೈಸೂರಿನ ಮಕ್ಕಳ ತಜ್ಞ ಡಾ|ಯು.ಜಿ.ಶೆಣೈಯವರು ಡಾ| ಎಂ.ರಾಯಪ್ಪ ಕಾಮತ್ ಸಂಸ್ಮರಣಾ ಭಾಷಣ ನಡೆಸಿ, ಮಕ್ಕಳ ಆರೈಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸುವ ಬಗ್ಗೆ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು.
ಮುಂಬೈ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಐಎಂಎ ಮೂಲ್ಕಿ ಘಟಕದ ಸ್ಥಾಪಕಾಧ್ಯಕ್ಷ ಡಾ|ಎಂ.ವಿ.ಭಟ್, ಪೂರ್ವಾಧ್ಯಕ್ಷ ಡಾ|ಚಂದ್ರಕಾಂತ ಭಟ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ|ಪಮೀದಾ ಬೇಗಂ, ಕಾಲೇಜು ಆಡಳಿತ ಮಂಡಳಿ ಸದಸ್ಯ ಪ್ರೊ|ಯು.ನಾಗೇಶ್ ಶೆಣೈ, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಪೈ ವೇದಿಕೆಯಲ್ಲಿದ್ದರು. ಪ್ರೊ.ಹಯವದನ ಉಪಾಧ್ಯ ನಿರೂಪಿಸಿದರು.ಡಾ|ಚಂದ್ರಕಾಂತ ಭಟ್ ವಂದಿಸಿದರು.

Comments

comments

Leave a Reply

Read previous post:
ವಿಜಯಾ ಕಾಲೇಜಿನ ಸಂಚಿಕೆ “ವಿಜಯಾ 12 ಬಿಡುಗಡೆ”

Bhagyavan Sanil ಮೂಲ್ಕಿ: ನಮ್ಮಲೆಲ್ಲರ ಜ್ಞಾನದೇಗುಲವಾದ ಈ ಕಾಲೇಜಿನ ಸ್ವರ್ಣಮಹೋತ್ಸವವು ವಿಜೃಂಭಣೆಯಿಂದ ನಡೆಯುವಲ್ಲಿ ವಿದ್ಯಾರ್ಥಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮುಂಬೈ ಉದ್ಯಮಿ, ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ...

Close