ವಿಜಯಾ ಕಾಲೇಜಿನ ಸಂಚಿಕೆ “ವಿಜಯಾ 12 ಬಿಡುಗಡೆ”

Bhagyavan Sanil

ಮೂಲ್ಕಿ: ನಮ್ಮಲೆಲ್ಲರ ಜ್ಞಾನದೇಗುಲವಾದ ಈ ಕಾಲೇಜಿನ ಸ್ವರ್ಣಮಹೋತ್ಸವವು ವಿಜೃಂಭಣೆಯಿಂದ ನಡೆಯುವಲ್ಲಿ ವಿದ್ಯಾರ್ಥಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮುಂಬೈ ಉದ್ಯಮಿ, ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.

ಮಂಗಳವಾರ ಮೂಲ್ಕಿ ವಿಜಯಾ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ವಿಜಯಾ 12 ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಕಾಲೇಜಿನಲ್ಲಿ ಕಲಿತು ತಮ್ಮ ಸಾಧನೆಯಿಂದ ಪ್ರಪಂಚದಾದ್ಯಂತ ಉನ್ನತಿಯನ್ನು ಕಂಡಿರುವ ಹಳೆ ವಿದ್ಯಾರ್ಥಿಗಳಂತೆ ಸ್ವರ್ಣ ಮಹೋತ್ಸವ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿರುವ ನೀವು ಬಹಳ ಭಾಗ್ಯಶಾಲಿಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಎಂ.ಎ.ಆರ್.ಕುಡ್ವಾ ಸ್ವಾಗತಿಸಿದರು. ಮೈಸೂರಿನ ಮಕ್ಕಳತಜ್ಞ ಡಾ| ಯು.ಜಿ.ಶೆಣೈ, ಡಾ|ಎಂ.ವಿ.ಭಟ್, ಡಾ|ಚಂದ್ರಕಾಂತ ಭಟ್, ಕಾಲೇಜು ಆಡಳಿತ ಮಂಡಳಿಯ ಸದಸ್ಯ ಪ್ರೊ.ಯು.ನಾಗೇಶ್ ಶೆಣೈ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ.ಪಮೀದಾ ಬೇಗಂ, ಸಂಪಾದಕರಾದ ಪ್ರೊ. ಸೋಮಶೇಖರ ಭಟ್, ಕಾಲೇಜು ವಿದ್ಯಾರ್ಥಿಸಂಘದ ಅಧ್ಯಕ್ಷ ಅಮಿತ್ ಪೈ ವೇದಿಕೆಯಲ್ಲಿದ್ದರು. ಪ್ರೊ.ಹಯವದನ ಉಪಾಧ್ಯ ನಿರೂಪಿಸಿದರು.

Comments

comments

Leave a Reply

Read previous post:
ಶಿಕ್ಷಕರ ದಿನಾಚರಣೆ

Mithun Kodetoor ಕಿನ್ನಿಗೋಳಿಯ ವನಿತಾ ಸಮಾಜದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕಿ ಬರಹಗಾರ್ತಿ ಕಟೀಲು ಸಾವಿತ್ರೀ ಕೇಶವ ಹೊಳ್ಳರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪ್ರಮೀಳಾ...

Close