2012-13 ಸಾಲಿನ ಹೋಬಳಿ ಮಟ್ಟದ ಕ್ರೀಡಾ ಕೂಟ

Bhagyavan Sanil

ಮೂಲ್ಕಿ:ಕ್ರೀಡಾ ಸಾಧನೆಯೊಂದಿಗೆ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಪಡೆದು ಶೈಕ್ಷಣಿಕ ಬದುಕಿನ ಉನ್ನತಿಯನ್ನು ಸಾಧಿಸಬಹುದು ಎಂದು ತಾಲೂಕು ಪಂಚಾಯತಿ ಸದಸ್ಯೆ ವನಿತಾ ಉದಯ.ಅಮೀನ್ ಹೇಳಿದರು.
ದ.ಕ.ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೂಲ್ಕಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ಆಶ್ರಯದಲ್ಲಿ ಮೂಲ್ಕಿ ಎ ವಲಯದ 2012-13 ಸಾಲಿನ ಹೋಬಳಿ ಮಟ್ಟದ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿಲ್ಪಾಡಿ ಗ್ರಾಮ ಪಂ.ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿದರು.
ಈ ಸಂದರ್ಭ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಘುನಾಥ್,ಪಣಂಬೂರು ಕ್ಲಷ್ಟರ್ ಸಿ.ಆರ್‌.ಪಿ ರಾಮದಾಸ್,ಮೂಲ್ಕಿ ಕ್ಲಷ್ಟರ್ ಸಿ.ಆರ್‌.ಪಿ ಚಂದ್ರಕಲಾ, ದೈಹಿಕ ಶಿಕ್ಷಕ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ನಾಯಕ್, ಸಂಚಾಲಕರಾದ ಕೆ.ನರಸಿಂಹ ಪೈ, ಉಪಸ್ಥಿತರಿದ್ದರು, ಮುಖ್ಯೋಪಾದ್ಯಾಯಿನಿ ಚಂದ್ರಿಕಾ.ಎಸ್ ಭಂಡಾರಿ ಸ್ವಾಗತಿಸಿದರು, ಅಮಿತಾ ನಿರೂಪಿಸಿದರು, ಜಯಲಕ್ಷ್ಮಿ ವಂದಿಸಿದರು.


Comments

comments

Leave a Reply

Read previous post:
ಕೆಸರುಗದ್ದೆ ಕ್ರೀಡೋತ್ಸವ

Bhagyavan Sanil ಮೂಲ್ಕಿ: ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ಗದ್ದೆಯಲ್ಲಿ ಗುರುವಾರ ನಡೆಸಿದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ನಡೆದ ಹಗ್ಗ ಎಳೆಯುವ ಸ್ಪರ್ಧೆ ????...

Close