ಕಟೀಲಿನಲ್ಲಿ ರಕ್ತದಾನ ಶಿಬಿರ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಫ್ರೌಡ ಶಾಲೆಯಲ್ಲಿ ಭಾನುವಾರ ರಕ್ತದಾನ ಶಿಬಿರವು ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನನಪುರ, ಕಟೀಲು ಫ್ರೌಡಶಾಲಾ ಹಳೇ ವಿದ್ಯಾರ್ಥಿ ಸಂಘ ನಂದಿನಿ ಯುವಕ ವೃಂದ ಮಲ್ಲಿಗೆಯಂಗಡಿ ದೇವರ ಗುಡ್ಡೆ ಗೇಮ್ಸ್ ಕ್ಲಬ್, ಕೊಂಡೇಲ ತರುಣ ವೃಂದ, ಶ್ರೀ ದುರ್ಗಾಂಬಿಕಾ ಯುವಕ ಯುವತಿ ಮಂಡಲ ಗಿಡಿಗೆರೆ ವಿಜಯ ಯುವ ಸಂಗಮ ಎಕ್ಕಾರು, ಕಟೀಲ್ ಫ್ರೆಂಡ್ಸ್ ಕ್ಲಬ್ ಕಟೀಲ್ ಸ್ಪೋಟ್ಸ್ ಗೇಮ್ಸ್ ಕ್ಲಬ್ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಸಹಯೋಗದಲ್ಲಿ ನಡೆಯಿತು.
ಕಟೀಲು ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಬಜಪೆ ಪೋಲೀಸ್ ನಿರೀಕ್ಷಕ ದಿನಕರ ಶೆಟ್ಟಿ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್ ರಕ್ತದಾನ ನೀಡುವ ಮೂಲಕ ಶಿಬಿರ ಉದ್ಘಾಟಿಸಿದರು. 65 ಮಂದಿ ರಕ್ತದಾನ ಮಾಡಿದರು.

ಕಟೀಲು ಫ್ರೌಡಶಾಲಾ ಪ್ರಾಚಾರ್ಯ ಸತೀಶ್ ಭಟ್, ಆದರ್ಶ ಶೆಟ್ಟಿ ಎಕ್ಕಾರು, ಕೇಶವ ಕಟೀಲು,ರಾಜೇಶ್, ಅರುಣ್, ಕೇಶವ ಕರ್ಕೆರಾ, ಜಿತೇಂದ್ರ ಮತ್ತಿತರರಿದ್ದರು.

 

Comments

comments

Leave a Reply

Read previous post:
ಕೃಷಿ ಋಷಿ ಪ್ರಶಸ್ತಿ

Mithuna Kodethoor ಕಟೀಲು : ಇಲ್ಲಿನ ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದ ವತಿಯಿಂದ ಕೃಷಿ ಋಷಿ ಪ್ರಶಸ್ತಿಯನ್ನು ಕೃಷ್ಣಪ್ಪ ಪೂಜಾರಿ ಮತ್ತು ರುಕ್ಕು ಪೂಜಾರ್ತಿಯವರಿಗೆ ನೀಡಿ ಗೌರವಿಸಲಾಯಿತು....

Close