ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಗುರುವಾರ ಸರ್ವ ಧರ್ಮ ಧಾರ್ಮಿಕ ಸಭೆ ನಡೆಯಿತು. ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಸಂಶೋದಕ, ಪತ್ರಕರ್ತ ಕೆ.ಎಲ್. ಕುಂಡಾಂತಯ ಗಣಪತಿಯ ಜಾನಪದ ಹಾಗೂ ಪುರಾಣ ಕಥೆಯ ಬಗ್ಗೆ ಪ್ರಧಾನ ಉಪನ್ಯಾಸವಿತ್ತರು. ದೈವ ಪಾತ್ರಿ ವಸಂತ ಕೊಡೆತ್ತೂರು ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಪ್ರೆಡ್ ಜೆ. ಪಿಂಟೋ, ಟಿ.ಎ. ನಝೀರ್ ಗುತ್ತಕಾಡು, ಕಟೀಲು ಅರ್ಚಕ ಗೋಪಾಲ ಕೃಷ್ಣ ಆಸ್ರಣ್ಣ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಭಾಲಕೃಷ್ಣ ಶೆಟ್ಟಿ, ಲಯನ್ಸ್ ಅಧ್ಯಕ್ಷ ಭುಜಂಗ ಬಂಜನ್ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನಾಮದೇವ ಕಾಮತ್, ಭುವನಾಭಿರಾಮ ಉಡುಪ, ಪಿ. ಸತೀಶ್ ರಾವ್, ಶಂಕರ ಕೋಟ್ಯಾನ್, ಸಮಿತಿ ಕಾರ್ಯದರ್ಶಿ ದೇವದಾಸ್, ಸದಸ್ಯರುಗಳಾದ ಗಣೇಶ ಶೆಟ್ಟಿಗಾರ್, ಜಯಂತ ಕರ್ಕೆರಾ, ನಾರಾಯಣ, ಕುಮಾರ ಅಮೀನ್, ಸುಮೀತ್ ಕುಮಾರ್, ಆನಂದ ಮತ್ತಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಗಣೇಶೋತ್ಸವ 3ನೇ ದಿನ

Yashuaikala

Close