ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ವಿತರಣೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ವ್ಯಾಪ್ತಿಗೊಳಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ವಿತರಣಾ ಕಾರ್ಯಕ್ರಮ ಪಂಚಾಯಿತಿ ಸಭಾ ಭವನದಲ್ಲಿ ಜರಗಿತು.
ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಬಾಂಡ್ ವಿತರಣೆಯನ್ನು ಉದ್ಘಾಟಿಸಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಆತ್ಮ ವಿಶ್ವಾಸವನ್ನು ಬೆಳೆಸುವಲ್ಲಿ ಹಾಗೂ ಸಮಾಜದ ಮುಂಚೂಣಿಗೆ ತರಲು ಇತರ ವರ್ಗದ ಜನರು ಸಹಕಾರಿಯಾಗಬೇಕು ಎಂದು ಹೇಳಿದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಎಸ್. ಕೋಟ್ಯಾನ್, ದ.ಕ.ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಜೀರ್, ಬಂಟ್ವಾಳ ಎನ್.ಐ. ಸಿ. ಬ್ರಾಂಚ್ ಮ್ಯಾನೇಜರ್ ಪುಷ್ಪಲತಾ ಕೆ.ಪಿ. ಉಪಸ್ಥಿತರಿದ್ದರು. ,
ಪಿಡಿಒ ಗಣೇಶ್ ಬಡಿಗೇರ ಸ್ವಾಗತಿಸಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ವಿತರಣೆಯ ವಿನೂತನ ಪ್ರಯೋಗ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿದೆ 154ಪರಿಶಿಷ್ಟ ಜಾತಿ ಮತ್ತು 56 ಪರಿಶಿಷ್ಟ ಪಂಗಡದ 210 ಕುಟುಂಬಗಳು, ಒಟ್ಟು 724 ಜನ ಫಲಾನುಭಾವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಒಟ್ಟು ವಿಮೆಯ ಮೊತ್ತ 1,18,500.

Comments

comments

Leave a Reply

Read previous post:
ಕಟೀಲು ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

Raghunath Kamath ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿಗೆ ಎಂ.ಆರ್.ಪಿ.ಎಲ್ ಕೊಡುಗೆಯಾಗಿ ನೀಡಿದ ರೂ.10ಲಕ್ಷ ವೆಚ್ಚದ ಕಂಪ್ಯೂಟರ್ ಲ್ಯಾಬ್‌ನ್ನು ಎಂ.ಆರ್.ಪಿ.ಎಲ್ ಜನರಲ್ ಮ್ಯಾನೇಜರ್...

Close