ಕಟೀಲು ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

Raghunath Kamath

ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿಗೆ ಎಂ.ಆರ್.ಪಿ.ಎಲ್ ಕೊಡುಗೆಯಾಗಿ ನೀಡಿದ ರೂ.10ಲಕ್ಷ ವೆಚ್ಚದ ಕಂಪ್ಯೂಟರ್ ಲ್ಯಾಬ್‌ನ್ನು ಎಂ.ಆರ್.ಪಿ.ಎಲ್ ಜನರಲ್ ಮ್ಯಾನೇಜರ್ ಸಂಜಯ್ ದೀಕ್ಷೀತ್ ಉದ್ಘಾಟಿಸಿದರು. ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಟೀಲಿನ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರ ನೀಡಲು ಎಂ.ಆರ್.ಪಿ.ಎಲ್ ಸಮ್ಮತಿಸಿದೆ ಎಂದರು. ಎಂ.ಆರ್.ಪಿ.ಎಲ್ ನ ಸಹಾಯಕ ಪ್ರಬಂಧಕ ಯತಿರಾಜ್ ಸಾಲ್ಯಾನ್, ಎಂ.ಆರ್.ಪಿ.ಎಲ್ ತನ್ನ ಲಾಭಾಂಶದಲ್ಲಿ ಬಹುಪಾಲನ್ನು ಶೈಕ್ಷಣಿಕ ಅಭಿವೃದ್ಧಿಗೆ ದೇಣಿಗೆ ನೀಡಿರುವುದು ಗಮನಾರ್ಹ, ಗ್ರಾಮೀಣ ಶಾಲೆಗಳ ವಿದ್ಯಾರ್ಥಿನಿ ನಿಲಯಗಳ ಅಭಿವೃದ್ಧಿ ಕಮ್ಯೂನಿಟಿ ಹಾಲ್ ಅಲ್ಲದೆ ಈ ಬಾರಿ 4 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಕಾಲರ್ ಶಿಪ್ ವಿತರಿಸಿದೆ ಎಂದರು. ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ ಶುಭಾಶಂಸನೆಗೈದರು, ಈಶ್ವರ ಕಟೀಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನೀಲಯ ಕೋಟ್ಯಾನ್ ಉಪಸ್ಥಿತರಿದ್ದರು. 

Comments

comments

Leave a Reply

Read previous post:
ಭಕ್ತಿ ಭಾವ ಸಂಗಮ

Lionel Pinto ಕಿನ್ನಿಗೋಳಿ : ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ದ.ಕ. ಜಿಲ್ಲೆ ಪ್ರಾಯೋಜಕತ್ವದಲ್ಲಿ ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದ...

Close