ಬಹರೈನ್ ನಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

 K.B. Jagadish

ಶ್ರೀ ವಿಶ್ವಕರ್ಮ ಸೇವಾ ಬಳಗ, ಬಹರೈನ್ ಇವರು ಮೂರನೇ ವರ್ಷದ “ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ”ವನ್ನುದಿನಾಂಕ 21.09.2012ನೇ ಶುಕ್ರವಾರ ಮನಾಮದಲ್ಲಿರುವ ಶ್ರೀ ಕೃಷ್ಣ ಮಂದಿರದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿಸಿದರು. ಸುಪ್ರಸಿದ್ಧ ಜ್ಯೋತಿಷಿ, ವಾಸ್ತು ಶಾಸ್ತ್ರ ಪ್ರವೀಣ ಮತ್ತು ಅನರ್ಘ್ಯರತ್ನ ತಜ್ನರಾದ ಶ್ರೀ ಅಶೋಕ್ ಪುರೋಹಿತ್, ಮುಂಬೈ ಇವರ ದಿವ್ಯ ಉಪಸ್ಥಿತಿ ಹಾಗೂಪೌರೋಹಿತ್ಯದೊಂದಿಗೆ ಬೆಳಿಗ್ಗೆ 10 ಘಂಟೆಗೆ ಕಲಶಪ್ರತಿಷ್ಟಾಪನೆಗೊಂಡಿತು. ಬಳಗದ ಮಹಿಳೆಯರು ಶ್ರೀ ವಿಶ್ವಕರ್ಮ ಸ್ತೋತ್ರ, ಶ್ರೀ ಕಾಳಿಕಾಂಬಾ ಸ್ತೋತ್ರ, ಶ್ರೀ ಮಹಿಷಮರ್ಧಿನಿ ಸ್ತೋತ್ರ ಮತ್ತು ಶ್ರೀ ಲಲಿತಾಷ್ಟೋತ್ತರ ಶತನಾಮಾವಳಿಗಳಭಕ್ತಿಪೂರ್ವಕ ಪಠಣೆಗೈದರು. ಆ ಬಳಿಕ ಶ್ರೀ ರಾಜೇಶ್ ಕೊಡತ್ತೂರುಹಾಗೂ ಶ್ರೀ ಪ್ರದೀಪ್ ಆಚಾರ್ಯ, ಕಾರ್ಕಳ ಇವರ ಮುಂದಾಳುತ್ವದಲ್ಲಿ, ಬಳಗದ ಉತ್ಸಾಹೀ ಸದಸ್ಯರು ಹಾಗೂ “ವಿಶ್ವಕಲಾವೇದಿ” ಎಂಬ ಕೇರಳ ಮೂಲದ ವಿಶ್ವಕರ್ಮಸಂಘದ ಸದಸ್ಯರಿಂದ ಭಕ್ತಿಗೀತೆ-ಭಜನಾ ಕಾರ್ಯಕ್ರಮ ನಡೆಯಿತು.  ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದವಿತರಣೆ ನಂತರ ಮಹಾಪ್ರಸಾದ-ಅನ್ನ ಸಂತರ್ಪಣೆ ನೆರವೇರಿತು.  “ವಿಶೇಷ ಸೇವೆ” ಪೂಜೆಯಲ್ಲಿ ಭಾಗವಹಿಸಿದ ಭಗವದ್ಭಕ್ತರನ್ನು ಶ್ರೀ ಪುರೋಹಿತ್ ವಿಶೇಷ ಪ್ರಾರ್ಥನೆ ಮೂಲಕ ಫಲಪುಷ್ಪ-ಪ್ರಸಾದದೊಂದಿಗೆ ಹರಸಿದರು. ಬಳಗದ ಅಧ್ಯಕ್ಷ ಶ್ರೀ ಕೆ.ಬಿ.ಜಗದೀಶ್ ಪೂಜಾ ಮಹೋತ್ಸವದ ಯಶಸ್ಸಿಗೆ ಸರ್ವ ರೀತಿಯಲ್ಲಿ ಸಹಕರಿಸಿದ ಮಹನೀಯರನ್ನು ಮನಸಾರೆ ವಂದಿಸಿದರು.

Comments

comments

Leave a Reply

Read previous post:
ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ವಿತರಣೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ವ್ಯಾಪ್ತಿಗೊಳಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ವಿತರಣಾ...

Close