ವಿದ್ಯಾ ದೇಗುಲ ಸರಸ್ವತಿ ಮಂದಿರ ಆಗಬೇಕು

Narendra Kerekadu
ಮೂಲ್ಕಿ : ಪಾರಂಪರಿಕ ಪರಂಪರೆಯ ಗುರುಕುಲ ಪದ್ಧತಿಯಲ್ಲಿ ವಿದ್ಯಾ ಸಂಸ್ಥೆಯಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಲ್ಲಿ ಶಿಕ್ಷಣ ಪಡೆಯುವ ಸಂಪ್ರದಾಯ ವಿತ್ತು ಇಂದು ಆ ಪರಂಪರೆ ಮರೆಯಾಗುತ್ತಿದೆ. ಶಿಕ್ಷಣ ಕೇಂದ್ರಗಳು ಉದ್ಯಮ ಆಗುವ ಬದಲು ವಿದ್ಯಾ ದೇಗುಲದ ಸರಸ್ವತಿಯ ಮಂದಿರವಾಗಬೇಕು ಎಂದು ಕಟೀಲು ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಅವರು ಶನಿವಾರ ಮೂಲ್ಕಿಯ ವಿಜಯಾ ಕಾಲೇಜು ಸ್ಥಾಪನೆಯಾಗಿ ೫೦ನೇ ವರ್ಷದ ಸಂಭ್ರಮದ ಪ್ರಯುಕ್ತ ಸುವರ್ಣ ಮಹೋತ್ಸವದ ಕಾರ್ಯಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಶಾಸಕ ಅಭಯಚಂದ್ರ ವಹಿಸಿ ಮಾತನಾಡಿ ಮೂಲ್ಕಿಯ ಗ್ರಾಮೀಣ ಭಾಗದಲ್ಲಿ ಹಿರಿಯರು ದೂರದೃಷ್ಟಿಯನ್ನು ಇಟ್ಟುಕೊಂಡು ಸ್ಥಾಪಿಸಿದ ವಿಜಯ ಕಾಲೇಜು ಇಂದು ಸಾರ್ಥಕ್ಯ ಪಡೆದಿದ್ದು ಅದರ ಭವಿಷ್ಯವನ್ನು ಇಂದಿನ ವಿದ್ಯಾರ್ಥಿಗಳು ಮತ್ತಷ್ಟು ಬೆಳಗಿಸಬೇಕು ಎಂದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸುವರ್ಣ ಮಹೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು.
ಮಣಿಪಾಲ ಎಜುಕೇಶನ್ ಸೊಸೈಟಿಯ ಆಡಳಿತ ನಿರ್ದೇಶಕ ಡಾ.ಎಚ್.ಶಾಂತರಾಮ್, ಮೂಲ್ಕಿ ನಗರ ಪಂಚಾಯಿತಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮುಂಬಯಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಅಚ್ಚುತ ಕುಡ್ವಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಮಿದಾ ಬೇಗಂ, ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶಮಿನಾ ಆಳ್ವಾ, ಪ್ರೊ.ನಾರಾಯಣ, ಅಮಿತ್ ಪೈ, ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಲಾಂಛನದ ಬಿಡುಗಡೆ ಸಮಾರಂಭದ ಮೊದಲು ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಮೂಲ್ಕಿ ಪೇಟೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದರು.

 

Comments

comments

Leave a Reply

Read previous post:
ಮುಲ್ಕಿ ನಗರ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಶಶಿಕಾಂತ್ ಶೆಟ್ಟಿ

ಮುಲ್ಕಿ : ಮುಲ್ಕಿ ನಗರ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರು ಬಿ.ಎಂ.ಆಸೀಫ್, ಹಸನಬ್ಬ ಯಾನೆ ಪುತುಬಾವ, ವಿಮಲ...

Close