ಮೂಲ್ಕಿ ಪೌರಕಾರ್ಮಿಕ ದಿನಾಚರಣೆ

Bhagyavan Sanil
ಮುಲ್ಕಿ : ಪೌರ ಕಾರ್ಮಿಕರಾಗಿ ನಗರದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ನೀವು ದುಶ್ಚಟಗಳಿಂದ ಮುಕ್ತರಾಗಿದ್ದರೆ ಮಾತ್ರ ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು
ಶನಿವಾರ ಮುಲ್ಕಿ ನಗರ ಪಂಚಾಯತ್ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು. ಮುಲ್ಕಿ ನಗರ ವ್ಯಾಪ್ತಿಯಲ್ಲಿ ಶುಚಿತ್ವವನ್ನು ಕಾಪಾಡಲು ನಿಮಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದರೊಂದಿಗೆ ನಿಮ್ಮ ಸೇವೆಯನ್ನು ಪರಿಗಣಿಸಿ ಖಾಯಂಗೊಳಿಸುವಲ್ಲಿ ನಗರ ಪಂಚಾಯತಿ ಸಹಕರಿಸಲಿದೆ ಎಂದರು.
ಈ ಸಂದರ್ಭ ಪೌರ ಕಾರ್ಮಿಕರಾದ ಬೊಳ್ಳು, ಶಿವ, ಕೃಷ್ಣ, ಶಂಕರ ಇವರನ್ನು ಮುಲ್ಕಿ ನ.ಪಂ ವತಿಯಿಂದ ಸನ್ಮಾನಿಸಲಾಯಿತು ಮತ್ತು ತಲಾ ಒಂದು ಗ್ಯಾಸ್ ಸಿಲಿಂಡರ್ ಮತ್ತು ಒಲೆಯನ್ನು ನೀಡಲಾಯಿತು.
ಮುಲ್ಕಿ ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ವಿಮಲಾ ಪೂಜಾರಿ ಮತ್ತು ಮುಖ್ಯಾಧಿಕಾರಿ ಹರಿಶ್ಚಂದ್ರ.ಪಿ.ಸಾಲ್ಯಾನ್, ಸದಸ್ಯರಾದ ಸತೀಶ್ ಅಂಚನ್, ವಂದನಾ ಕಾಮತ್, ಪುತ್ತು ಬಾವಾ, ಸುಮತಿ, ನ.ಪಂ ಇಂಜಿನಿಯರ್ ದಿನೇಶ್, ಆರೋಗ್ಯ ಅಧಿಕಾರಿ ರಾಜೇಶ್, ಸಿಬ್ಬಂದಿಗಳಾದ ಶಶಿಕಲಾ, ವಾಣಿ ಆಳ್ವಾ, ಪಸನ್ನ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply