ಸಮಾಜಮುಖಿ ಸೇವೆಯಿಂದ ದೇಶದ ಔನ್ಯತಿ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಸಮಾಜಮುಖಿ ಸೇವೆ ನೀಡಿದರೆ ನಮ್ಮ ದೇಶ ಎಲ್ಲಾ ರೀತಿಯಲ್ಲಿ ಔನ್ಯತಿ ಹೊಂದುವುದು ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರವಿಶಂಕರ್ ರೈ ಕಿನ್ನಿಗೋಳಿ ಲಯನ್ಸ್ ಕ್ಲಬ್ ಗೆ ಭಾನುವಾರ ಅಧಿಕೃತ ಭೇಟಿ ನೀಡಿದ ಸಂದರ್ಭ ಹೇಳಿದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ವತಿಯಿಂದ ವೈದಕೀಯ ಚಿಕಿತ್ಸೆಗಾಗಿ ಅರ್ಹರಿಗೆ ಸಹಾಯಧನ ನೀಡಲಾಯಿತು.
ವಲಯಾಧ್ಯಕ್ಷ ಮೆಲ್ವಿನ್ ಡಿಸೋಜ, ಮಾಜಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಲೀಲಾ ಬಂಜನ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗೇಶ್, ವಲಯದ ಎಲ್ಲಾ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು ಉಪಸ್ಥಿತರಿದ್ದರು.  ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಭುಜಂಗ ಬಂಜನ್ ಸ್ವಾಗತಿಸಿ, ಯೋಗೀಶ್ ರಾವ್ ವಂದಿಸಿದರು. ಲಾರೆನ್ಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮೂಲ್ಕಿ ಪೌರಕಾರ್ಮಿಕ ದಿನಾಚರಣೆ

Bhagyavan Sanil ಮುಲ್ಕಿ : ಪೌರ ಕಾರ್ಮಿಕರಾಗಿ ನಗರದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ನೀವು ದುಶ್ಚಟಗಳಿಂದ ಮುಕ್ತರಾಗಿದ್ದರೆ ಮಾತ್ರ ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದು ಮೂಲ್ಕಿ ನಗರ...

Close