ಮದ್ಯವರ್ಜನ ಶಿಭಿರ ಸಮಾರೋಪ

Bhagyavan Sanil
ಮುಲ್ಕಿ : ದುಶ್ಚಟಗಳಿಂದ ಸಮಾಜಕ್ಕೆ ಭಾರವಾಗಿ ಬದುಕುತ್ತಿರುವವರನ್ನು ಸರಿಪಡಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬೆರೆತು ಬಾಳಿ ಕುಟುಂಬ ಜೀವನದಲ್ಲಿ ಸಂತೃಪ್ತಿಯನ್ನು ಪಡೆಯುವಂತೆ ಮಾಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದು ರಾಜ್ಯ ವಿಪಕ್ಷ ಮುಖ್ಯ ಸಚೇತಕರಾದ ಅಭಯಚಂದ್ರ ಜೈನ್ ಹೇಳಿದರು.
ಅವರು ಶನಿವಾರ ಮುಲ್ಕಿ ಪುತ್ರನ್ ಮೂಲಸ್ಥಾನದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಮುಲ್ಕಿ ವಲಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳು, ಮುಲ್ಕಿ ನಗರ ಪಂಚಾಯತ್, ಬಂಟರ ಸಂಘ ಮುಲ್ಕಿ, ಬಿಲ್ಲವ ಸಮಾಜ ಸೇವಾ ಸಂಘ ಮುಲ್ಕಿ, ಪೂಜಾ ಎರೇಂಜರ‍್ಸ್ ಹಳೆಯಂಗಡಿ, ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 530ನೇ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. 73ಮದ್ಯಮುಕ್ತ ಸದಸ್ಯರಲ್ಲಿ ಭಾಸ್ಕರ ತಮ್ಮ ಅನಿಸಿಕೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ವಹಿಸಿದ್ದರು.
ಅತಿಥಿಗಳಾಗಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಕಸ್ತೂರಿ ಪಂಜ, ಯೋಜನೆಯ ಪ್ರಗತಿ ನಿರ್ದೇಶಕ ಸಂಪತ್ ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ಯೋಜನೆಯ ಅಧ್ಯಕ್ಷರಾದ ಸಂಪತ್ ಕುಮಾರ್, ಜಿ.ಪಂ ಅರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಈಶ್ವರ ಕಟೀಲು, ಉದ್ಯಮಿ ಜಯಕೃಷ್ಣ ಕೋಟ್ಯಾನ್, ಮುಲ್ಕಿ ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧಕ್ಷೆ ವಿಮಲಾ ಪೂಜಾರಿ, ಶಿಬಿರ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಬಾಲಚಂದ್ರ ಸನಿಲ್ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆ ಮುಲ್ಕಿ ವಲಯಾಧ್ಯಕ್ಷ  ಶ್ರೀಧರ ಶೆಟ್ಟಿ ಸ್ವಾಗತಿಸಿದರು. ಮೇಲ್ವಿಚಾರಕರಾದ ಕೊರಗಪ್ಪ ಗೌಡ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ತೋಕೂರು ಹರಿದಾಸ್ ಭಟ್ ವಂದಿಸಿದರು.

Comments

comments

Leave a Reply

Read previous post:
ಆರಾಧನಾ ಅನುದಾನ

Bhagyavan Sanil ಆರಾಧನಾ ಯೋಜನೆಯಡಿಯಲ್ಲಿ ಮುಲ್ಕಿ ಕೆ.ಎಸ್.ರಾವ್ ನಗರದ ಶಾಫೀ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂ50ಸಾವಿರ ಮೊತ್ತದ ಅನುದಾನವನ್ನು ಶಾಸಕ ಅಭಯಚಂದ್ರ ಜೈನ್ ರವರು ಜಮಾತ್ ಅಧ್ಯಕ್ಷ...

Close