ಪಠ್ಯೇತರ ಚಟುವಟಿಕೆಯೂ ಬಹು ಮುಖ್ಯ

ಕಟೀಲು : ಇಂದಿನ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಯೂ ಬಹು ಮುಖ್ಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅವರು ದ.ಕ. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಭಾರತಮಾತಾ ಫ್ರೌಢಶಾಲೆ ಪುನರೂರು ಇವರ ಆಶ್ರಯದಲ್ಲಿ ನಡೆದ ಮುಲ್ಕಿ ಹೋಬಳಿ ಮಟ್ಟದ ಫ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಧ್ವಜಾರೋಹಣಗೈದರು. , ಶಿಕ್ಷಣ ಮತ್ತು ಆರೋಗ್ಯ ಸಮಿತಿ ಜಿಲ್ಲಾ ಪಂಚಾಯಿತಿ ದ.ಕ. ಅಧ್ಯಕ್ಷ ಈಶ್ವರ್ ಕಟೀಲ್ ಕ್ರೀಡಾ ಜ್ಯೋತಿ ಉದ್ಘಾಟಿಸಿದರು.
ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಮಾಧವ ಬಂಗೇರ, ಕಟೀಲು ಪದವಿಪೂರ್ವ ಕಾಲೇಜು ಪ್ರಾಚಾರ್ಯ ಜಯರಾಮ ಪೂಂಜಾ, ಕಟೀಲು ಫ್ರೌಢಶಾಲಾ ಉಪಪ್ರಾಚಾರ್ಯ ಸುರೇಶ್ ಭಟ್, ಕಟೀಲು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಕೇಶವ, ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಮ್.ಎಸ್. ಅಂಗಡಿ, ಸಿ.ಆರ್.ಪಿ. ಉಲ್ಲಂಜೆ ಕ್ಲಸ್ಟರ್ ಜಗದೀಶ ನಾವಡ, ಜಿಲ್ಲಾ ದೈಹಿಕ ಶಿಕ್ಷಕರ ಸಂಫ ಕಾರ್ಯದರ್ಶಿ ಕೆ. ಎಚ್. ನಾಯ್ಕ್, ಪುನರೂರು ಭಾರತಮಾತಾ ಫ್ರೌಢಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಸಮಾಜಮುಖಿ ಸೇವೆಯಿಂದ ದೇಶದ ಔನ್ಯತಿ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಸಮಾಜಮುಖಿ ಸೇವೆ ನೀಡಿದರೆ ನಮ್ಮ ದೇಶ ಎಲ್ಲಾ ರೀತಿಯಲ್ಲಿ ಔನ್ಯತಿ ಹೊಂದುವುದು ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರವಿಶಂಕರ್ ರೈ ಕಿನ್ನಿಗೋಳಿ ಲಯನ್ಸ್...

Close