ವೃಧ್ಯಾಪ್ಯದ ಮಾನಸಿಕ ಕಾಯಿಲೆಗಳು ಮತ್ತು ಪರಿಹಾರ ಮಾಹಿತಿ

Bhagyavan Sanil

ಮುಲ್ಕಿ : ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ನಡೆಸಿಕೊಂಡು ಎಲ್ಲರಲ್ಲಿ ಬೆರೆತುಕೊಂಡು ಸಂತೋಷವಾಗಿದ್ದರೆ ಅಲ್ಜಿಮರ್ ನಂತಹಾ ಮಾನಸಿಕ ಕಾಯಿಲೆಗಳಿಂದ ದೂರವಿರಬಹುದು ಎಂದು ಮನಃಶಾಸ್ತ್ರಜ್ಞ ಚಂದ್ರಮೋಹನ್ ಅಂಚನ್ ಹೇಳಿದರು.
ಶುಕ್ರವಾರ ಮುಲ್ಕಿ ರೋಟರಿ ಕ್ಲಬ್ ಶತಾಬ್ಧ ಭವನದಲ್ಲಿ ವೃಧ್ಯಾಪ್ಯದಲ್ಲಿ ಕಾಡುವ ಮಾನಸಿಕ ಕಾಯಿಲೆಗಳು ಮತ್ತು ಪರಿಹಾರ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಈ ಕಾಯಿಲೆ ಎಲ್ಲರಿಗೂ ಬರುವ ಸಾಧ್ಯತೆಗಳಿಲ್ಲ ಆದುದರಿಂದ ಇದರ ಬಗ್ಗೆ ಅನಗತ್ಯ ಭಯ ಸಲ್ಲದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಜೆಸಿ.ಸಾಲ್ಯಾನ್ ವಹಿಸಿದ್ದರು. ಪೂರ್ವಾಧ್ಯಕ್ಷ ಪ್ರೊ.ಅಂಬ್ರೋಸ್ ಪುರ್ತಾದೊ,ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು. ಪ್ರೊ. ವಿಷ್ಣು ಮೂರ್ತಿ ಪ್ರಾರ್ಥಿಸಿದರು.ರಾಜಾ ಪತ್ರಾವೊ ವಂದಿಸಿದರು

Comments

comments

Leave a Reply

Read previous post:
ಮೂಲ್ಕಿ ಅನಂತ ಚತುರ್ದಶಿ

Bhagyavan Sanil ಮೂಲ್ಕಿ: ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ನಡೆದ ಅನಂತ ಚತುರ್ದಶಿ (ನೋಂಪು) ಪ್ರಯುಕ್ತ ಶಾಂಭವೀ ನದಿಯಲ್ಲಿ ಪೂಜಾ ಕಾರ್ಯ ನಡೆಯಿತು.

Close