ದೈಹಿಕ ಶಿಕ್ಷಣ ಕಲಿಕೆಗೆ ಪೂರಕ : ಬೇಬಿ ಕೋಟ್ಯಾನ್

ಕಿನ್ನಿಗೋಳಿ : ದೈಹಿಕ ಶಿಕ್ಷಣ ಕಲಿಕೆಗೆ ಪೂರಕ. ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಮನೋಸ್ಥೆರ್ಯ ಹೆಚ್ಚಾಗುವುದು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ , ಪದ್ಮನೂರು ಇವರ ಸಂಯೋಜನೆಯಲ್ಲಿ ನಡೆದ ಮೂಲ್ಕಿ “ಬಿ” ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಗೌಡ, ಮೆನ್ನಬೆಟ್ಟು ಪಂಚಾಯಿತಿ ಸದಸ್ಯ ಹರಿಶ್ಚಂದ್ರ ರಾವ್, ಸಿಆರ್‌ಪಿ ಪದ್ಮನೂರು ಕ್ಲಸ್ಟರ್ ಜಗದೀಶ ನಾವಡ, ಸಂಜೀವ ಶ್ರೀಯಾನ್, ಕಟೀಲು ಪದವಿಪೂರ್ವ ಕಾಲೇಜು ಪ್ರಾಚಾರ್ಯ ಜಯರಾಮ ಪೂಂಜಾ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಕಟೀಲು ಫ್ರೌಢಶಾಲೆ ಶಿಕ್ಷಕ ಕೆ.ವಿ ಶೆಟ್ಟಿ, ಸಾಯಿನಾಥ ಶೆಟ್ಟಿ, ಸುಂದರ ಪೂಜಾರಿ, ಪದ್ಮನೂರು ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷ ರಾಜೇಂದ್ರ, ವಿಶ್ವನಾಥ ಶೆಟ್ಟಿ, ಶೇಖರ ಪೂಜಾರಿ, ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಗಿರಿಜಾ ಬಿ. ಸ್ವಾಗತಿಸಿ. ಶಿಕ್ಷಕಿ ವಾಸಂತಿ ವಂದಿಸಿದರು. ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಗಾಂಧಿ ಜಯಂತಿ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ 2012-13 ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕ್ರಿಯಾ ಯೋಜನೆ ಪಟ್ಟಿ...

Close