ಹಳೆಯಂಗಡಿಯಲ್ಲಿ ಹಿರಿಯ ನಾಗರಿಕರಿಗೆ ಗುರುತುಚೀಟಿ ವಿತರಣೆ

Ln.Vasanth Bernhard

ಕಿನ್ನಿಗೋಳಿ: ಹಳೆಯಂಗಡಿ ಹಿರಿಯ ನಾಗರಿಕರಿಗೆ ಸಹಾಯ ಮಾಡತಕ್ಕ ಇಂತಹ ಕಾರ್ಯಕ್ರಮಗಳು ಪ್ರಶಂಸನೀಯ ಎಂದು ಲಯನ್ ಪ್ರಾಂತೀಯ ಅಧ್ಯಕ್ಷರಾದ ಲಯನ್ಸ್ ರವಿಶಂಕರ ರೈರವರು ನುಡಿದರು. ಅವರು ಹಳೆಯಂಗಡಿ ಬಿಲ್ಲವ ಸಂಘದಲ್ಲಿ ಲಯನ್ಸ್ ಕ್ಲಬ್ ಹಳೆಯಂಗಡಿ, ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ಆಶ್ರಯದಲ್ಲಿ ಮಂಗಳೂರು ಹಿರಿಯ ನಾಗರಿಕರ ಸಂಘ(ರಿ) ಇದರ ವತಿಯಿಂದ ನಡೆದ ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಹಿರಿಯ ನಾಗರಿಕ ಸಂಘ(ರಿ)ದ ಕಾರ್ಯದರ್ಶಿ ರಮೇಶ್ ರಾವ್‌ರವರ ಕಾರ್ಯಕ್ರಮ ಬಗ್ಗೆ ಪ್ರಸ್ತಾವನೆ ಗೈದರು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್, ಯಾದವ್ ದೇವಾಡಿಗ, ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಬಂಗೇರ, ಕ್ಲಬ್‌ನ ಕೋಶಾಧಿಕಾರಿ ಯಶೋಧರ್ ಸಾಲ್ಯಾನ್, ಎನ್.ಎಸ್.ಎಸ್.ಅಧಿಕಾರಿ ಸಂತೋಷ್ ಪಿಂಟೋ ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಜಗದೀಶ್ ಬಾಳ ಸ್ವಾಗತಿಸಿ, ಉಪಾಧ್ಯಕ್ಷ ಜಯಾನಂದ ಸುವರ್ಣ ವಂದಿಸಿದರು. 

Comments

comments

Leave a Reply

Read previous post:
ಬಿಲ್ಲವ ಸಮಾಜದ ಶಕ್ತಿಗೆ ಶತಧ್ವಜ ಪಾದಯಾತ್ರೆ ಪ್ರೇರಣೆ ಆಗಲಿ

Narendra Kerekad ಮುಲ್ಕಿ: ಕರಾವಳಿ ಭಾಗದಲ್ಲಿ ಕುದ್ರೋಳಿ ಕ್ಷೇತ್ರಕ್ಕೆ ವಿಶೇಷ ಮಾನ್ಯತೆ ಇದ್ದು ಅದರ ಶತಕ ಸಂಭ್ರಮದಲ್ಲಿ ಹಮ್ಮಿಕೊಂಡಿರುವ ಮುಲ್ಕಿಯುವವಾಹಿನಿಯ ಶತಧ್ವಜ ಪಾದಯಾತ್ರೆಯು ಬಿಲ್ಲವ ಸಂಘಟನೆಯ ಶಕ್ತಿಯನ್ನು ಸಮಾಜದಲ್ಲಿ...

Close