ಕಿನ್ನಿಗೋಳಿ ಪರಿಸರದಲ್ಲಿ ಗಾಂಧಿ ಜಯಂತಿ

ನಡುಗೋಡು ಸರಕಾರಿ ಫ್ರೌಢ ಶಾಲೆ : ಸರ್ವಧರ್ಮ ಪ್ರಾರ್ಥನೆ

ನಡುಗೋಡು ಸರಕಾರಿ ಫ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯಿತು. “ಪ್ಲಾಸ್ಟಿಕ್ ಆಳಿಸಿರಿ, ಪರಿಸರ ಉಳಿಸಿ, ಕಾನೂನಿಗಾಗಿ ಸ್ವಚ್ಚತೆ ಅಲ್ಲ ಆರೋಗ್ಯಕ್ಕಾಗಿ ಸ್ವಚ್ಚತೆ” ಕರಪತ್ರಗಳನ್ನು ಶಾಲೆಯ ಇಕೋಕ್ಲಬ್ ವತಿಯಿಂದ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಗೈದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಜೈ ಶಂಕರ್ ಶೆಟ್ಟಿ, ಎಸ್.ಡಿ.ಎಮ್. ಸಿ. ಅಧ್ಯಕ್ಷೆ ಚಿತ್ರಾ ಕೆ., ಹರಿಶ್ಚಂದ್ರ ಆಚಾರ್ಯ, ಮುಖ್ಯಶಿಕ್ಷಕ, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ
ಕಟೀಲು ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಕಾಲೇಜಿನ ಪ್ರಾಚಾರ್ಯ ಜಯರಾಮ ಪೂಂಜಾ ಗಾಂಧೀಜಿ ಅವರ ತತ್ವ ಆದರ್ಶಗಳ ಬಗ್ಗೆ ಪ್ರವಚನವಿತ್ತರು. ಕಾಲೇಜು ನಾಯಕ ದುರ್ಗಾಪ್ರಸಾದ್ ದಿವಾಣ ಕಾರ್ಯದರ್ಶಿ ಭವ್ಯಾ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ ಮತ್ತು ಸ್ವಚ್ಚತಾ ಕಾರ್ಯ ನಡೆಯಿತು.

ಕಮ್ಮಾಜೆ ಮೋರಾರ್ಜಿ ದೇಸಾಯಿ ವಸತಿ ಶಾಲೆ : ಗಾಂಧಿ ಜಯಂತಿ
ಕಮ್ಮಾಜೆ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಿ ಮಹಾನ್ ನಾಯಕರ ತತ್ವ ಸಿದ್ದಾಂತ, ದೋರಣೆ ಹಾಗೂ ಆದರ್ಶಗಳ ಬಗ್ಗೆ ಮಕ್ಕಳಿಗೆ ಶಾಲಾ ಮುಖ್ಯಶಿಕ್ಷಕರು ಪ್ರವಚನ ನೀಡಿದರು. ನಂತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.

ಕಿನ್ನಿಗೋಳಿ ಸೈಂಟ್ ಮೇರಿಸ್ ಶಾಲೆಯಲ್ಲಿ ಗಾಂಧಿ ಜಯಂತಿ
ಕಿನ್ನಿಗೋಳಿ ಸೈಂಟ್ ಮೇರಿಸ್ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಜನ್ಮದಿನಾಚರಣೆ ಆಚರಿಸಿ ರಾಷ್ಟ್ರ ನಾಯಕರ ತತ್ವ ಹಾಗೂ ಆದರ್ಶಗಳ ಬಗ್ಗೆ ಮಕ್ಕಳಿಗೆ ಶಾಲಾ ಮುಖ್ಯ ಶಿಕ್ಷಕಿ ಆನೆಟ್ ಉಪನ್ಯಾಸ ನೀಡಿದರು. ನಂತರ ಶಾಲಾ ವಿದ್ಯಾರ್ಥಿಗಳು ವೈವಿಧ್ಯ ಕಾರ್ಯಕ್ರಮ ನೀಡಿದರು.

 

Comments

comments

Leave a Reply

Read previous post:
ಹಳೆಯಂಗಡಿಯಲ್ಲಿ ಹಿರಿಯ ನಾಗರಿಕರಿಗೆ ಗುರುತುಚೀಟಿ ವಿತರಣೆ

Ln.Vasanth Bernhard ಕಿನ್ನಿಗೋಳಿ: ಹಳೆಯಂಗಡಿ ಹಿರಿಯ ನಾಗರಿಕರಿಗೆ ಸಹಾಯ ಮಾಡತಕ್ಕ ಇಂತಹ ಕಾರ್ಯಕ್ರಮಗಳು ಪ್ರಶಂಸನೀಯ ಎಂದು ಲಯನ್ ಪ್ರಾಂತೀಯ ಅಧ್ಯಕ್ಷರಾದ ಲಯನ್ಸ್ ರವಿಶಂಕರ ರೈರವರು ನುಡಿದರು. ಅವರು ಹಳೆಯಂಗಡಿ...

Close