ಬಿಲ್ಲವ ಸಮಾಜದ ಶಕ್ತಿಗೆ ಶತಧ್ವಜ ಪಾದಯಾತ್ರೆ ಪ್ರೇರಣೆ ಆಗಲಿ

Narendra Kerekad
ಮುಲ್ಕಿ: ಕರಾವಳಿ ಭಾಗದಲ್ಲಿ ಕುದ್ರೋಳಿ ಕ್ಷೇತ್ರಕ್ಕೆ ವಿಶೇಷ ಮಾನ್ಯತೆ ಇದ್ದು ಅದರ ಶತಕ ಸಂಭ್ರಮದಲ್ಲಿ ಹಮ್ಮಿಕೊಂಡಿರುವ ಮುಲ್ಕಿಯುವವಾಹಿನಿಯ ಶತಧ್ವಜ ಪಾದಯಾತ್ರೆಯು ಬಿಲ್ಲವ ಸಂಘಟನೆಯ ಶಕ್ತಿಯನ್ನು ಸಮಾಜದಲ್ಲಿ ಪ್ರದರ್ಶಿಸಲು ಉತ್ತಮ ಪ್ರೇರಣೆ ಆಗಬೇಕು, ಚದುರಿಹೋದ ಮನಸ್ಸುಗಳು ಹತ್ತಿರವಾಗಲು ವೇದಿಕೆಯಾಗಬೇಕು, ಯುವ ಜನತೆಯನ್ನು ಮುಖ್ಯವಾಹಿನಿಗೆ ಕರೆತರುವ ಜವಬ್ದಾರಿ ಸಂಘಟನೆಗೆ ಇದೆ ಎಂದು ಜಾನಪದ ಸಂಶೋಧಕ ಡಾ.ಗಣೇಶ್ ಅಮಿನ್ ಸಂಕಮಾರ್ ಹೇಳಿದರು.
ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬುಧವಾರ ನಡೆದ ಶತಧ್ವಜ ಪಾದಯಾತ್ರೆಯ ಪೂರ್ವ ತಯಾರಿಯ ಬಿಲ್ಲವ ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರಕಲ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಲ್ಕಿಸೇವಾ ದಳದ ಮೋಹನ್ ಕೋಟ್ಯಾನ್ ಮಾತನಾಡಿ ಸಂಘಟನೆಯನ್ನು ಕರಾವಳಿ ಭಾಗದಲ್ಲಿ ತೋರಿಸಿಕೊಟ್ಟ ಬಿಲ್ಲವ ಸಮಾಜವೇ ಇಂದು ಸಂಘಟನೆಯಿಂದ ವಿಮುಖವಾಗುತ್ತಿದ್ದು ಭವಿಷ್ಯದ ದೃಷ್ಟಿಯಲ್ಲಿ ಕುದ್ರೋಳಿ ಕ್ಷೇತ್ರದಲ್ಲಿಯೇ ಭದ್ರ ನೆಲೆಯನ್ನು ಕಂಡು ಕೊಳ್ಳಲು ಸಮಾಜವು ಚಿಂತನೆ ನಡೆಸಬೇಕು, ನಾರಾಯಣ ಗುರುಗಳ ತತ್ವ ಆದರ್ಶವನ್ನು ಪಾಲಿಸಿ ಯುವ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯ ಎಂದರು.
ಮುಲ್ಕಿಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ ಸಾಲಿಯಾನ್, ನಾರಾಯಣ ಗುರು ವಿದ್ಯಾ ಸಂಸ್ಥೆಯ ಸಂಚಾಲಕ ಹೆಚ್.ವಿ.ಕೋಟ್ಯಾನ್, ಪಯ್ಯೋಟ್ಟು ರತ್ನಾಕರ್ ಸಾಲ್ಯಾನ್, ಚಂದ್ರಶೇಖರ ನಾನಿಲ್ ಸುರತ್ಕಲ್, ಶತಧ್ವಜ ಪಾದಯಾತ್ರೆಯ ಸಂಚಾಲಕ ಯೋಗಿಶ್ ಕೋಟ್ಯಾನ್ ಚಿತ್ರಾಪು ಹಾಜರಿದ್ದರು.
ಚಂದ್ರಶೇಖರ್ ಸುವರ್ಣ ಪ್ರಸ್ತಾವನೆಗೈದರು, ಯುವವಾಹಿನಿ ಘಟಕದ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್ ಸ್ವಾಗತಿಸಿದರು, ನರೇಂದ್ರ ಕೆರೆಕಾಡು ನಿರೂಪಿಸಿ ಉದಯ ಅಮಿನ್ ಮಟ್ಟು ವಂದಿಸಿದರು.

Comments

comments

Leave a Reply

Read previous post:
ಹಿರಿಯ ನಾಗರಿಕರ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಿ, ರೋಟರಾಕ್ಟ್ ಹಾಗೂ ಇನ್ನರವೀಲ್, ಲಯನ್ಸ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಹಿರಿಯ ನಾಗರಿಕರ ಗುರುತು ಚೀಟಿ ವಿತರಣೆ ಮಂಗಳವಾರ ನಡೆಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ....

Close