ಪುನರೂರು ಶಾಲೆಯಲ್ಲಿ ಚಿಲಿಪಿಲಿ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್, ಇನ್ನರ್ ವೀಲ್ ಕ್ಲಬ್, ಹಾಗೂ ವಿಶ್ವನಾಥ ನವೋದಯ ಸ್ವಸಹಾಯ ಸಂಘದ ಆಶ್ರಯದಲ್ಲಿ ಪುನರೂರು ಭಾರತ ಮಾತಾ ಶಾಲೆಯಲ್ಲಿ ಮಕ್ಕಳಿಗಾಗಿ ಚಿಲಿಪಿಲಿ ಮೇಳ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಲಹರಿ ಕಲಾವಿದರಾದ ರೇಶ್ಮಾ ಹಾಗೂ ರಶ್ಮಿ ತರಬೇತಿ ನೀಡಿದರು. ಮಕ್ಕಳಿಗೆ ಡ್ರಾಯಿಂಗ್ ಶೀಟಿನಿಂದ ಮುಖವಾಡ, ಪೆನ್ ಸ್ಟಾಂಡ್, ಹೂ ಗುಚ್ಚ, ಗೆರೆಟೆಯಲ್ಲಿ ಕಲಾಕೃತಿ ರಚಿಸುವ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ನೀಡಲಾಯಿತು.
ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಕಾರ್ಯದರ್ಶಿ ಅಶೋಕ್, ಮಾಜಿ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್, ಪುಷ್ಪರಾಜ್, ಶೈಲೇಶ್ ಕಾಮತ್, ಇನ್ನರ್ ವೀಲ್ ಕಾರ್ಯದರ್ಶಿ ಸಿಂತಿಯಾ ಕುಟಿನ್ಹೊ, ಜಾನೆಟ್ ರುಸಾರಿಯೋ, ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಶಿಕ್ಷಕಿ ಜ್ಯೋತಿ, ಹರೀಶ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಗುತ್ತಕಾಡು ಸರಕಾರಿ ಶಾಲೆಯಲ್ಲಿ ಯೋಗ ತರಬೇತಿ ಕೇಂದ್ರ

ಕಿನ್ನಿಗೋಳಿ:  ದೈಹಿಕ ಬೆಳವಣಿಗೆ ಮತ್ತು ಮಾನಸಿಕ ನೆಮ್ಮದಿ, ಮನೋಸ್ಥೈರ್ಯ ರೋಗ ಪರಿಹಾರಕ ಗುಣ ಯೋಗಾಸನದಿಂದ ದೊರಕುತ್ತದೆ. ಎಂದು ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಅವರು...

Close