ಗುತ್ತಕಾಡು ಶಾಲಾ ವಿದ್ಯಾರ್ಥಿಗಳಿಗೆ ಹೂವು-ಹಣ್ಣುಗಳ ಗಿಡ ವಿತರಣೆ

ಕಿನ್ನಿಗೋಳಿ: “ಪರಿಸರವನ್ನು ಉಳಿಸಬೇಕಾದರೆ ಗಿಡ ಮರಗಳ ಬಗ್ಗೆ ಸೂಕ್ತ ಅರಿವು ನಮಗಿರಬೇಕು. ಗಿಡಗಳನ್ನು ನೆಟ್ಟು ಆರೈಕೆ ಮಾಡಿದರೆ ಸಸ್ಯ ಸಂಪತ್ತು ಅಭಿವೃದ್ಧಿಗೊಳ್ಳುತ್ತದೆ”. ಎಂದು ಗುತ್ತಕಾಡು ಶಾಲಾಭಿವೃದ್ಧಿ ಸಮಿತಿಯ ವಿವೇಕಾನಂದ ಹೇಳಿದರು.
ಅವರು ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಪ್ರಯುಕ್ತ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ವತಿಯಿಂದ ಗುತ್ತಕಾಡು ಶಾಲಾ ವಿದ್ಯಾರ್ಥಿಗಳಿಗೆ ಹೂವು-ಹಣ್ಣುಗಳ ಗಿಡಗಳನ್ನು ವಿತರಿಸುವ ಸಂದರ್ಭ ಮಾತನಾಡಿದರು. ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಗಿಡಗಳನ್ನು ವಿತರಿಸಿದರು.
ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಕಾರ್ಯದರ್ಶಿ ಅಶೋಕ್ ಶೆಟ್ಟಿಗಾರ್, ರೋಟರಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್, ಕೆ.ಬಿ. ಸುರೇಶ್ ಶಾಲಾ ಮುಖ್ಯ ಶಿಕ್ಷಕಿ ಉಷಾ ಉಪಸ್ಥಿತರಿದ್ದರು. 

Comments

comments

Leave a Reply

Read previous post:
S.K.P.A. ರಾಜ್ಯ ಬಂದ್ ಗೆ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋದಿಸಿ ನಾಳೆ ನಡೆಯುವ ರಾಜ್ಯ ಬಂದ್ ಗೆ ಹಾಗೂ ಕಾವೇರಿ ಪರ ಹೋರಾಟಗಾರರನ್ನು ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಷಿಯೇಶನ್ ದ.ಕ ಉಡುಪಿ...

Close