ಗುತ್ತಕಾಡು ಸರಕಾರಿ ಶಾಲೆಯಲ್ಲಿ ಯೋಗ ತರಬೇತಿ ಕೇಂದ್ರ

ಕಿನ್ನಿಗೋಳಿ:  ದೈಹಿಕ ಬೆಳವಣಿಗೆ ಮತ್ತು ಮಾನಸಿಕ ನೆಮ್ಮದಿ, ಮನೋಸ್ಥೈರ್ಯ ರೋಗ ಪರಿಹಾರಕ ಗುಣ ಯೋಗಾಸನದಿಂದ ದೊರಕುತ್ತದೆ. ಎಂದು ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಅವರು ಗುರುವಾರ ಗುತ್ತಕಾಡು ಸರಕಾರಿ ಶಾಲೆಯಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಯೋಗ ತರಬೇತಿ ಕೇಂದ್ರ ಉದ್ಘಾಟಸಿ ಮಾತನಾಡಿದರು.
ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಶಾಲಾಭಿವೃದ್ಧಿ ಸಮಿತಿಯ ವಿವೇಕಾನಂದ, ರೋಟರಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಯೋಗ ಶಿಕ್ಷಕ ಹರಿರಾಜ್, ಶಾಲಾ ಮುಖ್ಯ ಶಿಕ್ಷಕಿ ಉಷಾ, ರೋಟರಾಕ್ಟ್ ಕಾರ್ಯದರ್ಶಿ ಅಶೋಕ್ ಶೆಟ್ಟಿಗಾರ್, ಕೆ.ಬಿ. ಸುರೇಶ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಗುತ್ತಕಾಡು ಶಾಲಾ ವಿದ್ಯಾರ್ಥಿಗಳಿಗೆ ಹೂವು-ಹಣ್ಣುಗಳ ಗಿಡ ವಿತರಣೆ

ಕಿನ್ನಿಗೋಳಿ: "ಪರಿಸರವನ್ನು ಉಳಿಸಬೇಕಾದರೆ ಗಿಡ ಮರಗಳ ಬಗ್ಗೆ ಸೂಕ್ತ ಅರಿವು ನಮಗಿರಬೇಕು. ಗಿಡಗಳನ್ನು ನೆಟ್ಟು ಆರೈಕೆ ಮಾಡಿದರೆ ಸಸ್ಯ ಸಂಪತ್ತು ಅಭಿವೃದ್ಧಿಗೊಳ್ಳುತ್ತದೆ". ಎಂದು ಗುತ್ತಕಾಡು ಶಾಲಾಭಿವೃದ್ಧಿ ಸಮಿತಿಯ...

Close