ಗಿಡಿಗೆರೆ : ಆರೋಗ್ಯ ವಿಮೆ ಕಾರ್ಡು, ವಿತರಣೆ

ಕಿನ್ನಿಗೋಳಿ: ಜನರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಶೆಟ್ಟಿ ಹೇಳಿದರು.
ಕಟೀಲು, ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ಶ್ರೀ ದುರ್ಗಾಂಬಿಕಾ ಯುವಕ-ಯುವತಿ ಮಂಡಲ ಇವರ ಆಶ್ರಯದಲ್ಲಿ ಭಾನುವಾರ ನಡೆದ ಆರೋಗ್ಯ ವಿಮೆ ಕಾರ್ಡು ಬಾಂಡ್, ತೆಂಗಿನ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭ ಕಟೀಲು ಕೆ.ಸಂಜೀವರಾವ್ ಉದಾರ ದಾನವಾಗಿ ನೀಡಿದ ಧ್ವನಿವರ್ಧಕ ಸೆಟ್ಸ್ ನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲ್ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಹಸ್ತಾಂತರಿಸಿ “ ಆರೋಗ್ಯ ವಿಮೆ ಕಾರ್ಡು ಮತ್ತು ಬಾಂಡ್ ವಿತರಣೆ ಮೆನಬೆಟ್ಟು ಗ್ರಾಮ ಪಂಚಾಯಿತಿಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅನುದಾನ ಹಾಗೂ ತೆಂಗಿನ ಸಸಿ ವಿತರಣೆ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಯೋಜನೆಗಳಾಗಿದ್ದು ಜನರು ಇದರ ಪೂರ್ಣ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಬಡಿಗೇರ, ತೋಟಗಾರಿಕೆ ಇಲಾಖೆ ಅಧಿಕಾರಿ ನಾರಾಯಣಚಾರಿ, ಮಹಾಕಾಳಿ ದೈವಸ್ಥಾನ ಗುರಿಕಾರ ತಿಮ್ಮಪ್ಪ ಮೇಸ್ತ್ರಿ, ಚಂದ್ರಹಾಸ್.ಬಿ, ಭವಾನಿ, ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಬ್ರಹ್ಮಮುಗೇರ ಮಹಾಕಾಳಿ ಸೇವಾ ಸಮಿತಿ ಅಧ್ಯಕ್ಷ ಶ್ಯಾಮ ಗಿಡಿಗೆರೆ ಧನ್ಯವಾದವಿತ್ತರು, ರುಕ್ಮಯ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಎಂ.ಆರ್.ಪೂಂಜಾ ಐ.ಟಿ.ಐ : ವನಮಹೋತ್ಸವ

ಕಿನ್ನಿಗೋಳಿ: ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ ಪರಿಸರ ಮಾಲಿನ್ಯ ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿರುವ ಈ ಕಾಲದಲ್ಲಿ ಅದನ್ನು ಬಳಸಿ ಉದ್ಯೋಗದ ಅಭಿವೃಧ್ಧಿಯೂ ಆಗಬೇಕಿದೆ ಎಂದು ಮುಲ್ಕಿ...

Close