ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ: ಐ.ಸಿ.ವೈ.ಎಮ್. ಪಕ್ಷಿಕೆರೆ, ಸುರಗಿರಿ ಯುವಕ ಮಂಡಲ, ನೂರಾನಿಯಾ ಯಂಗ್ ಮೆನ್ಸ್ ಅಸೋಸಿಯೇಷನ್, ಶ್ರೀ ಹರಿ ಸ್ಪೋರ್ಟ್ಸ್ ಕೊಕುಡೆ, ಜೋಯ್ ಪ್ರೆಂಡ್ಸ್ ಕ್ಲಬ್ ಹೊಸಕಾಡು, ರಿಕ್ಷಾ ಚಾಲಕರ ಮಾಲಕರ ಸಂಘ ಪಕ್ಷಿಕೆರೆ, ಫ್ರೆಂಡ್ಸ್ ಕ್ಲಬ್ ಕಾಪಿಕಾಡು, ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ, ಕೆ.ಕೆ. ಆರ್. ಕ್ರಿಕೆಡರ‍್ಸ್ ಪಕ್ಷಿಕೆರೆ ಇವರ ಜಂಟೀ ಆಶ್ರಯದಲ್ಲಿ ಕಂಕನಾಡಿ ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ಸಹಯೋಗದೊಂದಿಗೆ, ರಕ್ತದಾನ ಶಿಬಿರ ಪಕ್ಷ್ಷಿಕೆರೆಯ ಸಂತ ಜೂಡರ ಸಭಾ ಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಪಕ್ಷಿಕೆರೆ ಧರ್ಮಗುರು ಫಾ| ಆಂಡ್ರ್ಯೂ ಡಿಸೋಜ ಉದ್ಘಾಟಿಸಿ ಆರ್ಶೀವಚನಗೈದರು. ವೇದಿಕೆಯಲ್ಲಿ ಸಹಾಯಕ ಧರ್ಮಗುರು ಫಾ| ಸುನಿಲ್ ಪಿಂಟೋ, ಕೆಎಂಸಿ ವೈದ್ಯೆ ಡಾ| ಚಾರು, ಚರ್ಚ್ ಉಪಾಧ್ಯಕ್ಷ ಡೊಲ್ಪಿ ಮಿರಾಂದ, ಸುರಗಿರಿ ದೇವಸ್ಥಾನ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಕಾಂಗ್ರೇಸ್ ಕಮಿಟಿ ವಲಯಾಧ್ಯಕ್ಷ ಮಯ್ಯದ್ದಿ, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು. ಐ.ಸಿ.ವೈ.ಎಮ್ ಅಧ್ಯಕ್ಷೆ ಪ್ಲಾವಿಯಾ ಕುಟಿನ್ಹೊ ಸ್ವಾಗತಿಸಿ, ಜಾಕ್ಸನ್ ಸಲ್ಡಾನ ವಂದಿಸಿದರು. ಮೆಲಿಟಾ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಐಕಳ ಪೊಂಪೈ ಪದವಿ ಕಾಲೇಜು ಸಭಾಭವನದ ಶಿಲಾನ್ಯಾಸ

ಕಿನ್ನಿಗೋಳಿ: ಐಕಳ ಪೊಂಪೈ ಪದವಿ ಕಾಲೇಜಿನಲ್ಲಿ ೧.೬೫ ಕೋಟಿ ವೆಚ್ಚದ ಮೆಗಾ ಯೋಜನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾಭವನ, ಗ್ರಂಥಾಲಯ ಹಾಗೂ ತರಗತಿ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಸಂಜೆ...

Close