ಎಂ.ಆರ್.ಪೂಂಜಾ ಐ.ಟಿ.ಐ : ವನಮಹೋತ್ಸವ

ಕಿನ್ನಿಗೋಳಿ: ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ ಪರಿಸರ ಮಾಲಿನ್ಯ ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿರುವ ಈ ಕಾಲದಲ್ಲಿ ಅದನ್ನು ಬಳಸಿ ಉದ್ಯೋಗದ ಅಭಿವೃಧ್ಧಿಯೂ ಆಗಬೇಕಿದೆ ಎಂದು ಮುಲ್ಕಿ ರೋಟರಿ ಅಧ್ಯಕ್ಷ ಜಿನ್‌ರಾಜ್ ಸಾಲ್ಯಾನ್ ಹೇಳಿದರು
ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮುಲ್ಕಿ ರೋಟರಿ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ಸ್ ಘಟಕ, ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ , ನಿಟ್ಟೆ ವಿದ್ಯಾ ಸಂಸ್ಥೆ ಗಳ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿದರು.

ಮುಲ್ಕಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಶ ರಾಜಾ ಪತ್ರಾವೋ ಗಿಡಗಳನ್ನು ನೆಟ್ಟು, “ ಜಿಲ್ಲೆಯ ಪರಿಸರವೇ ಹಸಿರಾಗಿದ್ದು ವಿಜ್ಞಾನವು ಪರಿಸರವನ್ನು ರಕ್ಷಿಸಲಾಗದು, ಆಮ್ಲಜನಕವನ್ನು ಉತ್ಪಾದಿಸಲಾರದು ಆದ್ದರಿಂದ ಪರಿಸರ ಉಳಿಸುವ ಆಂದೋಲನವು ಅತ್ಯಂತ ಅವಶ್ಯವಾಗಿದೆ” ಎಂದು ಕರೆಯಿತ್ತರು.

ರವಿಚಂದ್ರ, ವಿಲ್ಹ್‌ಮ್ ಮಾಬೆನ್, ಮೋಹನ್ ರಾವ್ ಮುಲ್ಕಿ ,ಎನ್.ಎಸ್. ಎಸ್. ಅಧಿಕಾರಿ ರಘುರಾಮ್ ರಾವ್, ಸುರೇಶ್ ಎಸ್. ವಿಶ್ವನಾಥ್ ರಾವ್, ಸಂಜೀವ ದೇವಾಡಿಗ ಮತ್ತತರರಿದ್ದರು.

ಐ.ಟಿ.ಐ ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಸ್ವಾಗತಿಸಿ, ತರಬೇತಿ ಅಧಿಕಾರಿ ಹರಿ ಎಚ್. ಧನ್ಯವಾದವಿತ್ತರು. ಸುರೇಶ್ ಎಸ್. ಕಾರ್ಯಕ್ರಮ ನಿರ್ವಹಿಸಿದರು.

Comments

comments

Leave a Reply

Read previous post:
ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ: ಐ.ಸಿ.ವೈ.ಎಮ್. ಪಕ್ಷಿಕೆರೆ, ಸುರಗಿರಿ ಯುವಕ ಮಂಡಲ, ನೂರಾನಿಯಾ ಯಂಗ್ ಮೆನ್ಸ್ ಅಸೋಸಿಯೇಷನ್, ಶ್ರೀ ಹರಿ ಸ್ಪೋರ್ಟ್ಸ್ ಕೊಕುಡೆ, ಜೋಯ್ ಪ್ರೆಂಡ್ಸ್ ಕ್ಲಬ್ ಹೊಸಕಾಡು, ರಿಕ್ಷಾ ಚಾಲಕರ ಮಾಲಕರ...

Close