ಕಿನ್ನಿಗೋಳಿ : ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್, ಇನ್ನರ್ ವೀಲ್ ಕ್ಲಬ್, ಯುಗಪುರುಷ ಸಂಸ್ಥೆಗಳ ಆಶ್ರಯದಲ್ಲಿ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಮಂಗಳವಾರ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.
ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಯಶವಂತ ಐಕಳ ಅಧ್ಯಕ್ಷತೆ ವಹಿಸಿದ್ದು ಡಾ| ಭವಾನಿ ಶಂಕರ್ ಕಣ್ಣಿನ ರಕ್ಷಣೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಅನಿಲ್ ಕುಮಾರ್, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶರತ್ ಶೆಟ್ಟಿ, ಉಪಸ್ಥಿತರಿದ್ದರು.
ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
115 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. 10 ಮಂದಿಗೆ ಉಚಿತ ಕಣ್ಣಿನ ಆಪರೇಷನ್‌ಗೆ ಕಳುಹಿಸಿ ಕೊಡಲಾಯಿತು.

 

Comments

comments

Leave a Reply

Read previous post:
ಪ್ರಗತಿ ಪರ ಕೃಷಿಕ ವೈ.ಕೆ ಸಾಲ್ಯಾನ್ ಸನ್ಮಾನ.

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್, ಸಗ್ರಿ ರೋಟರಾಕ್ಟ್, ಸುಭಾಷ್‌ನಗರ ರೋಟರಾಕ್ಟ್ಗಳ ಜಂಟೀ ಸಭೆ ಭಾನುವಾರ ಮೂರುಕಾವೇರಿಯಲ್ಲಿ ನಡೆಯಿತು. ಸಗ್ರಿ ರೋಟರಾಕ್ಟ್ ಸಭಾಪತಿ ಸಾಧನಾ ಕಿಣಿ ವ್ಯಕ್ತಿತ್ವ ವಿಕಸನ, ನಾಯಕತ್ವ, ಸಮಾಜ ಸೇವೆ ಹಾಗೂ...

Close