ಪ್ರಗತಿ ಪರ ಕೃಷಿಕ ವೈ.ಕೆ ಸಾಲ್ಯಾನ್ ಸನ್ಮಾನ.

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್, ಸಗ್ರಿ ರೋಟರಾಕ್ಟ್, ಸುಭಾಷ್‌ನಗರ ರೋಟರಾಕ್ಟ್ಗಳ ಜಂಟೀ ಸಭೆ ಭಾನುವಾರ ಮೂರುಕಾವೇರಿಯಲ್ಲಿ ನಡೆಯಿತು.
ಸಗ್ರಿ ರೋಟರಾಕ್ಟ್ ಸಭಾಪತಿ ಸಾಧನಾ ಕಿಣಿ ವ್ಯಕ್ತಿತ್ವ ವಿಕಸನ, ನಾಯಕತ್ವ, ಸಮಾಜ ಸೇವೆ ಹಾಗೂ ವೃತ್ತ್ತಿಪರ ಮಾಸಾಚರಣೆಯ ಬಗ್ಗೆ ಪ್ರಧಾನ ಉಪನ್ಯಾಸ ನೀಡಿದರು. ಈ ಸಂದರ್ಭ ಏಳಿಂಜೆ ಸಂಕಲಕರಿಯದ ಪ್ರಗತಿ ಪರ ಕೃಷಿಕ ವೈ.ಕೆ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಜೊತೆ ಕಾರ್ಯದರ್ಶಿ ಪುಷ್ಪರಾಜ್, ಸಗ್ರಿ ರೋಟರಾಕ್ಟ್ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ಮಂಜುನಾಥ ಸುಭಾಷ್‌ನಗರ ರೋಟರಾಕ್ಟ್ ಅಧ್ಯಕ್ಷ ಚಂದ್ರ ಪೂಜಾರಿ ಕಾರ್ಯದರ್ಶಿ ಸುಪ್ರೀತಾ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿಲೆಂಜೂರು ಕುಡಿಯುವ ನೀರಿನ ಕಾಮಾಗಾರಿ ಉದ್ಘಾಟನೆ.

ಕಿನ್ನಿಗೋಳಿ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಿಲೆಂಜೂರು ಗ್ರಾಮಕ್ಕೆ ರೂ5.50ಲಕ್ಷದ ಕುಡಿಯುವ ನೀರಿನ ಯೋಜನೆಯ ಕಾಮಾಗಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್ ಉದ್ಘಾಟಿಸಿದರು....

Close