ಕಟೀಲು ತಾಳಮದ್ದಳೆ ಸಪ್ತಾಹ ಪ್ರಾರಂಭ

ಕಿನ್ನಿಗೋಳಿ: ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ತಾಳಮದ್ದಳೆ ಸಪ್ತಾಹ 2012 ಕಟೀಲು ದೇವಳದ ಶಾಲಾ ಸರಸ್ವತೀ ಸದನದಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು.
ಕಟೀಲು ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ತಾಳೆಮದ್ದಳೆ ಸಪ್ತಾಹ ಕೂಟವನ್ನು ಉದ್ಘಾಟಿಸಿದರು.
ಕಟೀಲು ದೇವಳ ಅರ್ಚಕರಾದ ಹರಿ ನಾರಾಯಣ ಆಸ್ರಣ್ಣ, ಕಮಲಪ್ರಸಾದ ಆಸ್ರಣ್ಣ, ಯಕ್ಷಗಾನ ವಿದ್ವಾಂಸಕ ಡಾ| ಎಂ. ಪ್ರಭಾಕರ ಜೋಷಿ, ಕಟೀಲು ಐದು ಯಕ್ಷಗಾನ ಮೇಳಗಳ ಸಂಚಾಲಕ ದೇವಿಪ್ರಸಾದ ಶೆಟ್ಟಿ, ಶ್ರೀಧರ ಶೆಟ್ಟಿ ಮಾಣಿಲ ಕಲ್ಲಮುಂಡ್ಕ್ಕೂರು, ತ್ಯಾಂಪಣ್ಣ ಶೆಟ್ಟಿ, ಅಡ್ಯಾರುಗುತ್ತು, ದೇವದಾಸ ಹೊಳ್ಳ ವಾಲ್ತಾಡಿ, ಜಗದೀಶ್ ಶೆಟ್ಟಿ ಆಕಾಶ ಭವನ ಉಪಸ್ಥಿತರಿದ್ದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. 

Comments

comments

Leave a Reply

Read previous post:
ಕಿನ್ನಿಗೋಳಿ : ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್, ಇನ್ನರ್ ವೀಲ್ ಕ್ಲಬ್, ಯುಗಪುರುಷ ಸಂಸ್ಥೆಗಳ ಆಶ್ರಯದಲ್ಲಿ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಕಿನ್ನಿಗೋಳಿಯ...

Close