ಪಕ್ಷಿಕೆರೆ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಉತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವ ಅಕ್ಟೋಬರ್ 28ರಂದು ನಡೆಯಲಿದೆ ಎಂದು ಚರ್ಚ್‌ನ ನಿರ್ದೇಶಕರಾದ ಫಾ| ಆಂಡ್ರು ಲಿಯೊ ಡಿ’ಸೋಜ ತಿಳಿಸಿದ್ದಾರೆ.
ಅ.13 ಶನಿವಾರ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 6ರ ತನಕ ಜಾಗರಣಾ ಪ್ರಾರ್ಥನೆ ನಡೆಯುವುದು.
ಅ.18, 19, 20ರಂದು ಮೂರು ದಿನಗಳ ಧ್ಯಾನ ಕೂಟ ನಡೆಯುವುದು.
ಅ.21ನೇ ಭಾನುವಾರ ಸಂಜೆ 4.30ಗಂಟೆಗೆ ಪಕ್ಷಿಕೆರೆ ಚರ್ಚಿಗೆ ಸರ್ವ ಭಕ್ತರಿಂದ ಹೊರೆಕಾಣಿಕೆ ಮೆರವಣಿಗೆ, ಬಿಜೈ ಡಿವೈನ್ ಮರ್ಸಿ ಧ್ಯಾನ ಮಂದಿರದ ನಿರ್ದೇಶಕ ರೆ| ಫಾ| ಡೋಲ್ಫಿ ಸೆರಾವೊ ಪಕ್ಷಿಕೆರೆ ಪೇಟೆಯಲ್ಲಿ ಕನ್ನಡದಲ್ಲಿ ಪ್ರವಚನ ನೀಡಲಿರುವರು.
ಕಿನ್ನಿಗೋಳಿ ವಲಯದ ಧರ್ಮಗುರು ರೆ| ಫಾ| ಆಲ್ಫ್ರೆಡ್ ಜೆ. ಪಿಂಟೊ, ಬಲಿ ಪೂಜೆ ಹಾಗೂ ಪರಮ ಪ್ರಸಾದ ನೀಡಲಿರುವರು.
ಅ.23 ರಂದು ಬಡಕುಟುಂಬದವರ ಸಾಮೂಹಿಕ ವಿವಾಹ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಫಾ| ಡಾ | ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಕಲ್ಮಾಡಿ ಧರ್ಮಗುರು ರೆ| ಫಾ| ಆಲ್ಬನ್ ಡಿ’ಸೋಜ ಉಪಸ್ಥಿತಿಯಲ್ಲಿ ನಡೆಯಲಿದೆ.
ಅ.26ಶುಕ್ರವಾರ ಸಂಜೆ 6.೦೦ ಗಂಟೆಗೆ ಸಂತ ಜೂದರ ಪವಾಡ ಪ್ರತಿಮೆಯ ಭವ್ಯ ಮೆರವಣಿಗೆ ಪಕ್ಷಿಕೆರೆ ಪೇಟೆಯಿಂದ ಸಂತ ಜೂದರ ಪುಣ್ಯಕ್ಷೇತ್ರಕ್ಕೆ ನಡೆಯಲಿರುವುದು.
ಅ.27 ಶನಿವಾರ ಸಂಜೆ5.೦೦ ರಿಂದ 7.೦೦ ಗಂಟೆಯ ವರೆಗೆ ದಿವ್ಯ ಬಲಿಪೂಜೆ,
ಅ. 28ರಂದು ಭಾನುವಾರ ವಾರ್ಷಿಕ ಮಹೋತ್ಸವದ ಬಲಿಪೂಜೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಅತೀ ವಂದನೀಯ ಡಾ|| ಎಲೋಶಿಯಸ್ ಪಾವ್ಲ್ ಡಿ’ಸೋಜ ನಡೆಸುವರು.
ಪಕ್ಷಿಕೆರೆ ಚರ್ಚ್‌ನ ಮುಂದಿನ ಸಾಲಿನ ಯೋಜನೆಗಳು
ಪಕ್ಷಿಕೆರೆಯಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲೆ, ಉತ್ತಮ ಸಕಲ ಸೌಲಭ್ಯಗಳ ಸಭಾ ಭವನ, ಸಾಮೂಹಿಕ ಮದುವೆಗೆ ಶಾಶ್ವತ ನಿಧಿ, ವಿವಿಧ ಧರ್ಮದ ಬಡಜನಗಳ ಸಾಮೂಹಿಕ ವಿವಾಹದ ಸಂಯೋಜನೆ ಹಾಗೂ ವಿಧ್ಯಾರ್ಥಿ ನಿಲಯದಲ್ಲಿ ಫ್ರೌಢ ಶಾಲಾ ವಿಧ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಪತ್ರಿಕಾ ಪ್ರಕಟಣೆಯಲ್ಲಿ ಪಕ್ಷಿಕೆರೆ ಧರ್ಮಗುರು ರೆ|ಫಾ| ಆಂಡ್ರು ಲಿಯೊ ಡಿ’ಸೋಜ, ಸಹಾಯಕ ಧರ್ಮಗುರು ಸುನಿಲ್ ಪ್ರವೀಣ್ ಪಿಂಟೊ, ಚರ್ಚ್ ಉಪಾಧ್ಯಕ್ಷ ಡೊಲ್ಪಿ ಮಿರಾಂದ, ಯಾತ್ರಿಕ ಪುಸ್ತಕದ ಸಂಪಾದಕ ಲೂವಿಸ್ ಡಿ’ಸೋಜ ಉಪಸ್ಥಿತರಿದ್ದರು.

Website: www.stjudepakshikere.org

Comments

comments

Leave a Reply

Read previous post:
ಕಟೀಲು ತಾಳಮದ್ದಳೆ ಸಪ್ತಾಹ ಪ್ರಾರಂಭ

ಕಿನ್ನಿಗೋಳಿ: ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ತಾಳಮದ್ದಳೆ ಸಪ್ತಾಹ 2012 ಕಟೀಲು ದೇವಳದ ಶಾಲಾ ಸರಸ್ವತೀ ಸದನದಲ್ಲಿ ಮಂಗಳವಾರ...

Close