ಕಿನ್ನಿಗೋಳಿ ಉದ್ಯಮಿ ಅಪಹರಣಕ್ಕೆ ವಿಫಲ ಯತ್ನ

ಕಿನ್ನಿಗೊಳಿ :ಕಿನ್ನಿಗೊಳಿಯ ಉದ್ಯಮಿಯನ್ನು ಅವರ ಮನೆಯ ಮುಂದೆಯೇ ದುಷ್ಕರ್ಮಿಗಳು ಅಪಹರಿಸಲು ಶುಕ್ರವಾರ ಬೆಳಿಗ್ಗೆ ವಿಫಲ ಯತ್ನ ನಡೆಸಿದರು. ಕಿನ್ನಿಗೋಳಿ ಭಟ್ಟಕೋಡಿ ನಿವಾಸಿ ಮರದ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಸಿಪ್ರಿಯನ್ ಡಿಸೋಜಾ ಅಪಹರಣದ ಯತ್ನಕ್ಕೆ ಒಳಗಾದ ಉದ್ಯಮಿಯಾಗಿದ್ದಾರೆ.

ಸಿಪ್ರಿಯನ್ ಡಿಸೋಜಾರವರು ಎಂದಿನಂತೆ ಬೆಳಿಗ್ಗೆ ತಮ್ಮ ಮಕ್ಕಳನ್ನು ಸ್ಥಳೀಯ ಮೇರಿವೆಲ್ ಶಾಲೆಗೆ ವಾಹನದಲ್ಲಿ ಬಿಟ್ಟು ಬಂದು ಭಟ್ಟಕೋಡಿಯ ತಮ್ಮ ಮನೆಗೆ ಬರುತ್ತಿದ್ದಾಗ ಬಿಳಿ ಮಾರುತಿ ಕಾರಿನಲ್ಲಿ ಮೂವರು ಅಪಹರಣಕಾರರು ವಾಹನವನ್ನು ಅಡ್ಡಗಟ್ಟಿ ಮೊಬೈಲನ್ನು ಕೇಳಿ ಮಾತಿಗೆ ಇಳಿದರು. ಉಳಿದ ಇಬ್ಬರು ವಾಹನದ ಹಿಂದೆ ಬಂದು ಕುಳಿತುಕೊಂಡ ನಂತರ ಒರ್ವ ಪಿಸ್ತೂಲನ್ನು ತೋರಿಸಿ ವಾಹನವನ್ನು ಚಾಲನೆ ಮಾಡಲು ಸೂಚನೆ ನೀಡಿದರು. ಚಾಲಕನ ಸೀಟಿನಿಂದ ಹಾರಿ ಇಳಿದು ರಸ್ತೆಯಲ್ಲಿ ಒಡಿಬಂದೆ ಮೂವರು ಅಪಹರಣಕಾರರು ಬೆನ್ನ ಹಿಂದೆ ಓಡಿಬರುತ್ತಿದ್ದರು ನಾನು ಬೊಬ್ಬೆ ಹಾಕಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಲ್ಲಿ ಸಹಾಯಕ್ಕೆ ಕೇಳಿಕೊಂಡಾಗ ಸ್ಥಳೀಯ ಜನರು ಸೇರಿಕೊಂಡರು. ಅಪಹರಣಕಾರರು ಬಂದ ಕಾರಿನಲ್ಲಿಯೇ ಎಸ್.ಕೋಡಿ, ಪಕ್ಷಿಕೆರೆ ಅಥವಾ ಮೂಲ್ಕಿಯತ್ತ ತೆರಳಿರಬಹುದು. ಓಡಿ ಬರುವಾಗ ಕಾಲಿಗೆ ಗಾಯವಾದುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಬಿಳಿ ಮಾರುತಿ ಕಾರಿನಲ್ಲಿ ಚಾಲಕ ಸಹಿತ ನಾಲ್ಕು ಜನ ಯುವಕರಿದ್ದು ಸುಮಾರು 28 ರಿಂದ 30 ರ ಹರೆಯದವರಾಗಿದ್ದು ಅವರೆಲ್ಲರೂ ಅಪರಿಚಿತರು ಎಂದು ಪೊಲೀಸ್ ಠಾಣೆಯಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಟ್ಟಕೋಡಿಯಲ್ಲಿ ಮನೆ ಹಾಗೂ ಮರದ ಮಿಲ್ಲನ್ನು ಹೊಂದಿರುವ ಡಿಸೋಜಾರವರು ಕಿನ್ನಿಗೋಳಿಯ ಮುಖ್ಯಪೇಟೆಯಲ್ಲಿ ಮರದ ಬೃಹತ್ ಶೋರೂಂನ್ನು ಹೊಂದಿದ್ದು ಹಾಗೂ ಜಮೀನುಗಳನ್ನು ಖರೀದಿಸಿ ಅದನ್ನು ಸೈಟುಗಳಾಗಿ ಮಾರಾಟಮಾಡುವ ವ್ಯವಹಾರ ನಡೆಸುತ್ತಿದ್ದಾರೆ.
ಕಿನ್ನಿಗೋಳಿಯ ಉದ್ಯಮಿಯ ಅಪಹರಣದ ಬಗ್ಗೆ ಮೂಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

comments

Leave a Reply

Read previous post:
ಬಳ್ಕುಂಜೆ ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷ ನೆಲ್ಸನ್ ಲೋಬೊ ಆಯ್ಕೆ

ಕಿನ್ನಿಗೋಳಿ:  ಬಳ್ಕುಂಜೆ ಗ್ರಾಮ ಪಂಚಾಯಿತಿ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ನೆಲ್ಸನ್ ಲೋಬೋ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಪೌಲ್ ಡಿ’ಸೋಜ, ಪ್ರಭಾಕರ್ ಕವತ್ತಾರು, ಸರಳ ಶೆಟ್ಟಿ, ಖಜಾಂಚಿ ಜಯಶೀಲ ಅಮೀನ್,...

Close