ಅಪಹರಣ ಯತ್ನದ ಆರೋಪಿಗಳನ್ನು ಶೀಘ್ರ ಬಂಧಿಸಲು ಆಗ್ರಹ

ಕಿನ್ನಿಗೋಳಿ : ಕಿನ್ನಿಗೋಳಿಯ ಉದ್ಯಮಿ ಸಿಪ್ರಿಯನ್ ಡಿಸೋಜಾ ಅಪಹರಣ ಯತ್ನ ಮತ್ತು ಕಳೆದ ಎರಡು ವರ್ಷಗಳಿಂದ ಪರಿಸರದೆಲ್ಲೆಡೆ ಸರ ಸೆಳೆದು ಪರಾರಿ, ಜುವೆಲ್ಲರಿ ಅಂಗಡಿ ಕಳವು ಅಲ್ಲದೆ ಕಿನ್ನಿಗೋಳಿ ಪರಿಸರದ ನಾಗರೀಕರಿಗೆ ಬರುತ್ತಿರುವ ಬೆದರಿಕೆ ಕರೆಗಳು, ಸ್ಥಳಿಯ ಎ.ಟಿಎಂ ದರೋಡೆ ಘಟನೆಗಳು ನಡೆಯುತ್ತಿದ್ದು, ಮೂಲ್ಕಿ ಪೋಲೀಸರು ತಕ್ಷಣ ಸ್ಪಂದಿಸಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಈ ಬಗ್ಗೆ ಮಂಗಳವಾರ ತಾ.೧೬ ಸಂಜೆ ಕಿನ್ನಿಗೋಳಿ ಗಣೇಶೋತ್ಸವ ವಸಂತ ಮಂಟಪದ ಬಳಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಇದು ಇಲಾಖೆಯ ಬಗ್ಗೆ ಖಂಡನೆಯಲ್ಲ ಅಪರಾಧಿಗಳ ಬಗ್ಗೆ ಖಂಡನೆ ಎಂದು ಸ್ಥಳಿಯರಾದ ಲಾರೆನ್ಸ್ ಡಿಸೋಜಾ ಹೇಳಿದರು.
ಶನಿವಾರ ಸಂಜೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸ್ಥಳಿಯ ಲಯನ್ಸ್, ರೋಟರಿ, ರೊಟರಾಕ್ಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಿನ್ನಿಗೋಳಿಯಲ್ಲಿ ಹಲವಾರು ಬಾರಿ ಬೆದರಿಕೆ ಕರೆಗಳು ಅಫರಾಧ ಪ್ರಕರಣಗಳು ನಡೆದಿದ್ದು ಇದು ಸ್ಥಳಿಯರ ಕೈವಾಡದಿಂದ ಆಗಿರ ಬಹುದು ಎಂಬ ಶಂಕೆ ಇದೆ ಈ ಬಗ್ಗೆ ಪೋಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವುದು ಬಹಳ ಅಗತ್ಯ ಎಂದು ವಲೇರಿಯನ್ ಸಿಕ್ವೇರಾ ಹೇಳಿದರು.

ಬೆದರಿಕೆ ಕರೆ: ಈ ಸಂದರ್ಭ ಮಾತನಾಡಿದ ಸಿಪ್ರಿಯನ್ ಡಿಸೋಜಾ ನಡೆದ ಘಟನೆಯ ಬಗ್ಗೆ ವಿವರಿಸಿ ಇಂದು ಶನಿವಾರ ಮದ್ಯಾಹ್ನ ಸುಮಾರು 3.10ಕ್ಕೆ ಕಿನ್ನಿಗೋಳಿ ಪೇಟೆಯಲ್ಲಿರುವ ಅವರ ಸೋಜಾ ಫರ್ನಿಚರ್ ಅಂಗಡಿಯ ದೂರವಾಣಿಗೆ ವಿದೇಶಿ ನಂಬರಿನಿಂದ ಕರೆ ಮಾಡಿ ಜೀವ ಬೆದರಿಕೆ ಒಡ್ಡಲಾಗಿದ್ದು ಅಂಗಡಿಯಲ್ಲಿದ್ದ ನೌಕರ ಪೋನ್ ಕರೆ ಸ್ವೀಕರಿಸಿ ತಮಗೆ ತಿಳಿಸಿದ್ದಾನೆ ಈ ಬಗ್ಗೆ ಕಮಿಷನರ್‌ರವರಿಗೆ ದೂರು ನೀಡಲಾಗಿದೆ ಎಂದರು.

ಪೋಲೀಸರು ಒಂದು ವೇಳೆ ತಕ್ಷಣ ಸ್ಪಂದಿಸಿ ನಾಕಾ ಬಂದಿ ಮಾಡಿದ್ದರೆ ಅಫರಾಧಿಗಳು ಸಿಕ್ಕಿ ಬೀಳುವ ಸಾಧ್ಯತೆಗಳಿದ್ದವು. ಕಿನ್ನಿಗೋಳಿಯ ಸಮಸ್ಯೆಯ ಬಗ್ಗೆ ಮಾನ್ಯ ಗ್ರಹ ಸಚಿವರು ಮತ್ತು ಪೋಲೀಸ್ ಕಮಿಷನರ್ ರವರಿಗೆ ರಕ್ಷಣೆಯ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ರೋಬರ್ಟ್ ರೊಜಾರಿಯೋ ಹೇಳಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಮೂಲ್ಕಿ ನಿರೀಕ್ಷಕ ಬಶೀರ್ ಅಹಮ್ಮದ್ ಮಾತನಾಡಿ, ಕಮಿಷನರ್ ಸಾಹೇಬರು ಸ್ಪಂದಿಸಿ, ಕಾರ್ಯಾಚರಣೆಯನ್ನು ನಿರ್ದೇಶಿಸುತ್ತಿದ್ದಾರೆ. ಬೆದರಿಕೆ ಕರೆಗಳಿಗೆ ಹೆದರದೆ ಧೈರ್ಯವಾಗಿರಬೇಕು ಪರಿಸರದಲ್ಲಿ ಅಪರಿಚಿತ ವಾಹನ ಮತ್ತು ಜನರು ಕಂಡುಬಂದಲ್ಲಿ ತಕ್ಷಣ 100 ಕರೆಮಾಡಿ ಎಂದರು.
ಈ ಬಗ್ಗೆ ಮಾತನಾಡಿದ ರೊಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಸುಸಂಘಟಿತರಾಗಿ ಸೌಹಾರ್ದತೆಯಿಂದ ಬಾಳುತ್ತಿರುವ ಕಿನ್ನಿಗೋಳಿ ಜನತೆಗೆ ನೆಮ್ಮದಿಯ ದಿನಗಳು ಮರುಕಳಿಸುವಂತೆ ಪೋಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಎಂದರು. ಈ ಸಂದರ್ಭ ಭುಜಂಗ ಭಂಜನ್, ಭುವನಾಭಿರಾಮ ಉಡುಪ, ರಾಜೇಶ್ ಕೆಂಚನಕೆರೆ, ಕೆ.ಬಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕುಕ್ಕೆ ಸುಬ್ರಮಣ್ಯ ದೇವಸ್ಥಾನ ರಾಜ್ಯ ಧಾರ್ಮಿಕ ಪರಿಷತ್ ಸಭೆ – ಕೋಟ ಶ್ರೀನಿವಾಸ ಪೂಜಾರಿ

Bhagyavan Sanil ಮೂಲ್ಕಿ: ರಾಜ್ಯ ಧಾರ್ಮಿಕ ಪರಿಷತ್ ಸಭೆಯು ಪ್ರಪ್ರಥಮ ಬಾರಿಗೆ ದ.ಕ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನ.೬ರಂದು ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವರಾದ...

Close