ಕುಕ್ಕೆ ಸುಬ್ರಮಣ್ಯ ದೇವಸ್ಥಾನ ರಾಜ್ಯ ಧಾರ್ಮಿಕ ಪರಿಷತ್ ಸಭೆ – ಕೋಟ ಶ್ರೀನಿವಾಸ ಪೂಜಾರಿ

Bhagyavan Sanil
ಮೂಲ್ಕಿ: ರಾಜ್ಯ ಧಾರ್ಮಿಕ ಪರಿಷತ್ ಸಭೆಯು ಪ್ರಪ್ರಥಮ ಬಾರಿಗೆ ದ.ಕ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನ.೬ರಂದು ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮೂಲ್ಕಿ ಪೈಯೊಟ್ಟು ಸದಾಶಿವ ಸಾಲ್ಯಾನ್ ರವರ ಮನೆಗೆ ಸೌಹಾರ್ಧ ಭೇಟಿಗಾಗಿ ಬಂದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜಧಾನಿ ಬೆಂಗಳೂರಿನ ವಿಧಾನ ಸೌಧ ಮತ್ತು ವಿಕಾಸ ಸೌಧದಲ್ಲಿ ನಡೆಯುತ್ತಿದ್ದ ಧಾರ್ಮಿಕ ಪರಿಷತ್ ಸಭೆಯನ್ನು ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಹೀಗೆ ನಡೆಸುವುದರಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಸ್ತೂಲ ಮಾಹಿತಿ ದೊರೆಯುವುದರೊಂದಿಗೆ ಅಭಿವೃದ್ಧಿಗೆ ಪೂರಕವಾಗಿ ಸಭೆಯಲ್ಲಿ ನಿರ್ಣಯಗಳು ಉಂಟಾಗುವ ನಿರೀಕ್ಷೆ ಇದೆ ಎಂದರು. ಹೆಚ್ಚಿನ ದೇವಾಲಯಗಳು ರೋಸ್ಟರ್ ಪದ್ದತಿ ಮತ್ತು ಸರಕಾರಿ ನಿಯಮಾವಳಿ ಜಾರಿ ಮಾಡದಿರುವ ಪರಿಣಾಮ ಅಲ್ಲಿನ ಸಿಬ್ಬಂದಿಗಳಿಗೆ ಸಮಸ್ಯೆಯುಂಟಾಗಿದ್ದು ಸರ್ಕಾರಿ ಪದ್ದತಿಗನುಗುಣವಾಗಿ ಸ್ಪಂದಿಸಿದ ದೇವಾಲಯದ ನೌಕರರನ್ನುಖಾಯಂ ಗೊಳಿಸುವ ಮತ್ತು ತಾತ್ಕಾಲಿಕ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಮಾಡಲಾಗುವುದು ಎಂದರು.ರಾಜ್ಯದಲ್ಲಿ 34ಸಾವಿರ ದೇವಾಲಯಗಳಿದ್ದು ಪ್ರತೀ ದೇವಾಲಯದಲ್ಲಿ ಸರ್ಕಾರದ ಅನುದಾನದಲ್ಲಿ ಅನ್ನದಾನ ಸಾಧ್ಯವಿಲ್ಲ ದೇವಳದ ಸ್ವಂತ ಆದಾಯದ ಮೇರೆಗೆ ಅನ್ನದಾನ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಗ್ರಾಮೀಣ ಕ್ರೀಡೆಯಾದ ಕಂಬಳದಲ್ಲಿ ರಾಜ್ಯದಲ್ಲೇ ಹೆಸರುವಾಸಿಯಾದ ಪೈಯೊಟ್ಟು ಮನೆಯ ಸದಾಶಿವ ಸಾಲ್ಯಾನ್ ತಮ್ಮ ಸ್ನೇಹಿತರಾಗಿದ್ದು ಕೋಣಗಳನ್ನು ವೀಕ್ಷಿಸಿ ಅವರಿಂದ ಮಾಹಿತಿ ಪಡೆಯಲು ಭೇಟಿ ನೀಡಿದ್ದೇನೆ ಎಂದರು.ಈ ಸಂದರ್ಭ ಪೈಯೊಟ್ಟು ಮನೆಯ ವತಿಯಿಂದ ಸಚಿವರನ್ನು ಗೌರವಿಸಲಾಯಿತು.
ಈಸಂದರ್ಭ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ,ಪಾಂಗಳ ಗುಡ್ಡೆ ಗರೋಡಿಯ ಮುಖ್ಯಸ್ಥ ಸುಧಾಕರ ಟಿ.ಅಮೀನ್, ಪೈಯೊಟ್ಟು ಸದಾಶಿವ ಸಾಲ್ಯಾನ್, ಶಶೀಂದ್ರ ಸಾಲ್ಯಾನ್, ಮೋಹನ್ ಕೋಟ್ಯಾನ್, ಧನಂಜಯ ಮಟ್ಟು, ರೋಶನ್ ಕುಮಾರ್, ಶೈಲೇಶ್, ರವಿ ಸೂರಿಂಜೆ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಶ್ರೀ ಕಟೀಲೇಶ್ವರಿ ಭೂ ವ್ಯವಹಾರ ಕಛೇರಿ ಉದ್ಘಾಟಿನೆ

ಕಿನ್ನಿಗೋಳಿ: ಹಳೆಯಂಗಡಿಯ ಮಾರ್ಕೇಟ್ ರಸ್ತೆಯಲ್ಲಿ ಪ್ರಾರಂಭಗೊಂಡ ಶ್ರೀ ಕಟೀಲೇಶ್ವರಿ ಭೂ ವ್ಯವಹಾರ ಕಛೇರಿಯನ್ನು ಕರ್ನಾಟಕ ಸರಕಾರದ ವಿಪಕ್ಷ ಮುಖ್ಯ ಸಚೇತಕರಾದ ಕೆ. ಅಭಯಚಂದ್ರ ರವರು ದೀಪ ಬೆಳಗಿಸಿ ಉದ್ಘಾಟಿಸಿದರು....

Close