ಮೇರಿವೆಲ್ ಶಾಲೆ : ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಶಿಬಿರ

ಕಿನ್ನಿಗೋಳಿ : ಶಿಕ್ಷಣ ಶಿಸ್ತು ಸಂಘಟನೆಯ ಮೂಲಕ ದೇಶದ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಭಾಗಿಯಾಗಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್ ಮುಲ್ಕಿ ಕರೆಯಿತ್ತರು..
ಸೋಮವಾರದಂದು ಕಿನ್ನಿಗೋಳಿ ಮೇರಿವೆಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮುಲ್ಕಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಹರೀಶ್ಚಂದ್ರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶೈಲಾ ಸಾಂತುಮಯೋರ್, ಸ್ಕೌಟ್ ಕ್ಯಾಪ್ಟನ್ ಲಕ್ಷ್ಮಣ್ ಕೋಟ್ಯಾನ್ ಉಪಸ್ಥಿತರಿದ್ದರು.
ಮೇರಿವೆಲ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವಂ. ಭಗಿನಿ ಜೆಸಿಂತಾ ರೊಡ್ರಿಗಸ್ ಸ್ವಾಗತಿಸಿದರು. ಕಬ್ ಮಾಸ್ಟರ್ ವಿನಿತಾ ಸಿಕ್ವೇರಾ ವಂದಿಸಿ. ಪ್ಲೋಕ್ ಲೀಡರ್ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಉಲ್ಲಂಜೆ : ಆರ್ಥಿಕ ಧನ ಸಹಾಯ

ಕಿನ್ನಿಗೋಳಿ: ಆರ್ಥಿಕವಾಗಿ ಹಿಂದುಳಿದ ಉಲ್ಲಂಜೆಯ ಅಚ್ಚುತ ರಾವ್ ಅವರಿಗೆ ಮನೆ ಕಟ್ಟಲು ಹಾಗೂ ಪುತ್ರಿ ಜಯಲಕ್ಷ್ಮಿಯ ವಿವಾಹಕ್ಕೆ ಭಾನುವಾರದಂದು ಕಿನ್ನಿಗೋಳಿ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಉಲ್ಲಂಜೆ ಯುವಶಕ್ತಿ...

Close