ಲೆಕ್ಕಸಹಾಯಕರಾಗಿ ವರ್ಗಾವಣೆಗೊಂಡ ಯೋಗಿಶ್ ಸನಿಲ್

Bhagyavan Sanil

ಮೂಲ್ಕಿ:ಗ್ರಾಮೀಣ ಬಡವರ್ಗದ ಜನರಿಗೆ ಉತ್ತಮ ಸಹಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಯೋಗೀಶ್ ಸನಿಲ್ ರವರ ಸೇವೆ ಅನುಕರಣೀಯ ಎಂದು ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನೋದ್ ಎಸ್. ಸಾಲ್ಯಾನ್ ಹೇಳಿದರು.

ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಡ್ತಿಹೊಂದಿ ಕಿಲ್ಪಾಡಿ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕಸಹಾಯಕರಾಗಿ ವರ್ಗಾವಣೆಗೊಂಡ ಯೋಗಿಶ್ ಸನಿಲ್ ಇವರಿಗೆ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ಇತ್ತೀಚೆಗೆನಡೆದ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ತಾ.ಪಂ. ಸದಸ್ಯರಾದ ರಾಜು ಕುಂದರ್, ಪಂ.ಅಧ್ಯಕ್ಷೆ ಶ್ರೀಮತಿ ಕೊಲ್ಲು, ಮಾಜಿ ಅಧ್ಯಕ್ಷರಾದ ದೇವಕಿ, ಸುಮತಿ, ಶ್ಯಾಮಲ, ಪಂಚಾಯತ್ ಅಭಿವೃಧ್ದಿ ಅಧಿಕಾರಿ ಹರಿಶ್ಚಂದ್ರ, ಪಂಚಾಯತ್ ಸದಸ್ಯರಾದ ನಾರಾಯಣ ಸುವರ್ಣ, ಮೋಹನ್‌ದಾಸ, ಉಮೇಶ್ ಪೂಜಾರಿ, ಸುಕುಮಾರ್, ಸೋಮಶೇಖರ ಶೆಟ್ಟಿ, ಕುಸುಮ, ಸುರೇಖ, ಪ್ರಭಾವತಿ, ಸಂಪಾವತಿ, ಸಂಪತ್ ಕುಮಾರ್ ಮಾಜಿ ಸದಸ್ಯರಾದ ಶಾರದ, ಪಂಚಾಯತ್ ಸಿಬಂದಿಗಳಾದ ಶರ್ಮಿಳಾ, ವಂದನ, ಮಹೇಶ್ ಬಬಿತ, ಮತ್ತಿತ್ತರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮೇರಿವೆಲ್ ಶಾಲೆ : ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಶಿಬಿರ

ಕಿನ್ನಿಗೋಳಿ : ಶಿಕ್ಷಣ ಶಿಸ್ತು ಸಂಘಟನೆಯ ಮೂಲಕ ದೇಶದ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಭಾಗಿಯಾಗಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್ ಮುಲ್ಕಿ...

Close