ಭಯ ಮುಕ್ತ ಸಮಾಜದ ನಿರ್ಮಾಣ ಜನ ಜಾಗೃತಿ ಸಭೆ

ಕಿನ್ನಿಗೋಳಿ : ಬೆರಳೆಣಿಕೆಯಲ್ಲಿ ಅಫರಾಧಿ ಪ್ರವೃತ್ತಿ ಇರುವ ಜನರಿಂದ ಮಾತ್ರ ಸಾಮಾಜಿಕ ಶಾಂತಿ ಕದಡುತ್ತಿದ್ದು, ನಾವು ಅವರನ್ನು ಸರಿಯಾಗಿ ಗುರುತಿಸಿದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಮಾಡಲು ಸಾಧ್ಯ ಎಂದು ಪೋಲೀಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ ಹೇಳಿದರು.
ಇತ್ತಿಚಿನ ದಿನಗಳಲ್ಲಿ ಕಿನ್ನಿಗೋಳಿ ಪರಿಸರದಲ್ಲಿ ದರೋಡೆ, ಕಳ್ಳತನ, ಪೋನ್ ಮೂಲಕ ಜೀವ ಬೆದರಿಕೆ ಅಪಹರಣ ಯತ್ನ ಮುಂತಾದ ಪ್ರಕರಣಗಳಿಂದ ನೊಂದ ಜನರು ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ನಡೆಸಿದ ಭಯ ಮುಕ್ತ ಸಮಾಜದ ನಿರ್ಮಾಣಕ್ಕೆ ಜನ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜದ ಕೆಲವೊಂದು ಜನರು ಸ್ವಹಿತಾಸಕ್ತಿ ಸ್ವಾರ್ಥ ಸಾಧನೆಗಾಗಿ ಸಮಾಜದಲ್ಲಿ ಕೋಮುವಾದದ ದಳ್ಳುರಿ ಎಬ್ಬಿಸಿ ನಮ್ಮ ಪ್ರದೇಶದ ಶಾಂತಿ ಸುವ್ಯವಸ್ಥೆ ಹದಗೆಟ್ಟಲು ಕಾರಣವಾಗಿದ್ದು ಜನರು ತಿಳುವಳಿಕೆಂದ ವ್ಯವಹರಿಸಿದರೆ ಯಾವುದೇ ಭಯವಿರುವುದಿಲ್ಲ. ಬೆದರಿಕೆ ತಂತ್ರಗಳಿಗೆ ಮಾರು ಹೋಗಬಾರದು. ವಿದೇಶಿ ಪೋನ್ ಬೆದರಿಕೆಗಳಿಗೆ ಬಗ್ಗದೆ ಸ್ಪೈ ಪೋನ್ ತಂತ್ರಾಂಶವನ್ನು ಪೋನ್ ನಲ್ಲಿ ಅಳವಡಿಕೆ, ದಿನಚರಿಯನ್ನು ದಿನದಿಂದ ದಿನಕ್ಕೆ ಬದಲಾಯಿಸಿ ವ್ಯವಹಾರ ನಡೆಸುವುದು, ಅಂಗಡಿಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಕೆ, ಸ್ವಂತ ಮೊಬೈಲ್ ನಂಬರ್ ವೆಬ್ ಸೈಟಿಗೆ ತಾಣಗಳಿಗೆ ನೀಡದಿರುವುದು. ವಿದೇಶದ ಬೆದರಿಕೆ ಪೋನ್‌ಗೆ ಉತ್ತರಿಸದೆ ಸಿಮ್ ಬದಲಾಯಿಸುವುದು. ಮನೆ ಬಾಡಿಗೆಗೆ ಕೊಡುವಾಗ ಬಾಡಿಗೆಗೆ ಬರುವವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಮುಂತಾದ ಕ್ರಮಗಳಿಂದ ಅಫರಾಧ ಪ್ರಕರಣ ತಡೆಗಟ್ಟಬಹುದು ಮಾತ್ರವಲ್ಲ ಯಾವುದಾದರೂ ಶಂಕಿತ ವ್ಯಕ್ತಿಗಳು, ವಸ್ತುಗಳು ಮತ್ತು ವಾಹನ ಕಂಡುಬಂದಲ್ಲಿ 100ಕ್ಕೆ ಪೋನ್ ಮಾಡಿದಲ್ಲಿ ಪಿಸಿಆರ್ ಪೋಲೀಸರು ಆಗಮಿಸಿ ವಿಚಾರಣೆ ನಡೆಸುತ್ತಾರೆ ಎಂದರು.
ಈ ಸಂದರ್ಭ ಮುಲ್ಕಿ ಮೂಡಬಿದರೆ ಶಾಸಕ ಅಭಯಚಂದ್ರ ಜೈನ್, ಪೋಲೀಸ್ ನೀರೀಕ್ಷಕ ಬಶೀರ್ ಅಹಮ್ಮದ್, ಕಿನ್ನಿಗೋಳಿ ಗ್ರಾ. ಪಂ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ,ಲಯನ್ಸ್ ಅಧ್ಯಕ್ಷ ಭುಜಂಗ ಭಂಜನ್, ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶೆಟ್ಟಿ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಕಾರು ಚಾಲಕ ಮಾಲಕ ಸಂಘದ ಬಾಲಕೃಷ್ಣ ಸಾಲ್ಯಾನ್, ರೋಬರ್ಟ್ ರೊಜಾರಿಯೋ, ಟಿ.ಎಚ್. ಮಯ್ಯದ್ದಿ, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಶ್ರೀ ಕ್ಷೇತ್ರ ನೆಲ್ಲಿತೀರ್ಥ ಗುಹಾ ಪ್ರವೇಶ

ಅಕ್ಟೋಬರ್ 16 ರಂದು ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ಗುಹಾ ಪ್ರವೇಶ ತೀರ್ಥಸ್ನಾನ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ಕಟೀಲು ದೇವಳದ...

Close