ಕಿಲ್ಪಾಡಿ ಗ್ರಾ.ಪಂ. ಅಭಿವೃದ್ದಿಯಲ್ಲಿ ಮುನ್ನಡೆ

ಮೂಲ್ಕಿ; ಮಂಗಳೂರು ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯತ್‌ಗಳು ತಮ್ಮ ಗ್ರಾಮದ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಿದ್ದರಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಸಹ ಸೇರಿದ್ದು ಇಲ್ಲಿನ ಗ್ರಾಮ ಸಭೆ ಅಥವ ಇನ್ನಿತರ ಸಭೆಗಳಲ್ಲಿ ಜನರ ಸಹಕಾರವನ್ನು ನೀಡಿದ್ದರಿಂದ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯ ಚಟುವಟಿಕೆಯು ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಮಂಗಳೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಆರ್.ಪ್ರಕಾಶ್ ಹೇಳಿದರು.
ಕಿಲ್ಪಾಡಿ ಗ್ರಾಮ ಪಂಚಾಯತ್‌ನಲ್ಲಿ  ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಮುಖ್ಯ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯತ್‌ನ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲೂ ತಪ್ಪದೇ ತಮ್ಮ ಗ್ರಾಮದ ಸರ್ವೋತೋಮುಖ ಅಭಿವೃದ್ದಿಯಲ್ಲಿ ನಿಸ್ವಾರ್ಥವಾಗಿ ಶ್ರಮಿಸಿದ್ದೇನೆ ಎಂಬುವುದಕ್ಕೆ ಲೆಕ್ಕ ಪತ್ರವೇ ಸಾಕ್ಷಿ ಎಂದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೋಭಾ ಎಚ್., ಜಮಾಬಂದಿಯ ಸಹಾಯಕ ಅಧೀಕ್ಷಕ ಎಂ.ರಾಘವೇಂದ್ರ, ಪಂಚಾಯಿತಿಯ ಲೆಕ್ಕಾಧಿಕಾರಿ ಯೋಗೀಶ್ ನಾನಿಲ್, ಪಂಚಾಯತ್ ಉಪಾಧ್ಯಕ್ಷೆ ವಿಮಲ ಸುವರ್ಣ, ಸದಸ್ಯರಾದ ಮೋಹನ್ ಡಿ.ಅಮಿನ್ ಕುಬೆವೂರು, ಜಯ ಮಟ್ಟು, ಗೀತಾ ಆಚಾರ್ಯ ಕೆರೆಕಾಡು ಇನ್ನಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ನ ವಿವಿಧ ಲೆಕ್ಕಪತ್ರ, ದಾಖಲೆ, ಸಾಮಾಗ್ರಿಗಳ ದಾಸ್ತಾನನ್ನು
ಪರಿಶೀಲಿಸಿದರು.

Comments

comments

Leave a Reply

Read previous post:
ಭಯ ಮುಕ್ತ ಸಮಾಜದ ನಿರ್ಮಾಣ ಜನ ಜಾಗೃತಿ ಸಭೆ

ಕಿನ್ನಿಗೋಳಿ : ಬೆರಳೆಣಿಕೆಯಲ್ಲಿ ಅಫರಾಧಿ ಪ್ರವೃತ್ತಿ ಇರುವ ಜನರಿಂದ ಮಾತ್ರ ಸಾಮಾಜಿಕ ಶಾಂತಿ ಕದಡುತ್ತಿದ್ದು, ನಾವು ಅವರನ್ನು ಸರಿಯಾಗಿ ಗುರುತಿಸಿದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಮಾಡಲು ಸಾಧ್ಯ ಎಂದು...

Close