ಯುಗಪುರುಷ ಮಾಸ ಪತ್ರಿಕೆ ವಿಶೇಷಾಂಕ ಬಿಡುಗಡೆ

ಕಿನ್ನಿಗೋಳಿ: ನಿರಂತರವಾಗಿ ಕಳೆದ 66ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ಕನ್ನಡ ಮಾಸ ಪತ್ರಿಕೆ “ಯುಗಪುರುಷ” ದ ದಸರಾ-ದೀಪಾವಳಿ ವಿಶೇಷಾಂಕದ ಬಿಡುಗಡೆ ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸನ್ನಿಧಿಯಲ್ಲಿ ನಡೆಯಿತು.

ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು. ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮಾಜಿ ಕಸಾಪ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ ಪುನರೂರು, ಗುರುಪುರ ಗೋಳಿದಡಿಗುತ್ತು ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ, ಅಜಾರು ನಾಗರಾಜರಾಯರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿಲ್ಪಾಡಿ ಗ್ರಾ.ಪಂ. ಅಭಿವೃದ್ದಿಯಲ್ಲಿ ಮುನ್ನಡೆ

ಮೂಲ್ಕಿ; ಮಂಗಳೂರು ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯತ್‌ಗಳು ತಮ್ಮ ಗ್ರಾಮದ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಿದ್ದರಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಸಹ ಸೇರಿದ್ದು ಇಲ್ಲಿನ ಗ್ರಾಮ ಸಭೆ ಅಥವ...

Close