ತುಳು ಭಾಷೆ, ಸಂಸ್ಕೃತಿಗೆ ಪೂರಕ; ಡಾ| ಸಂಕಮಾರ್

ಕಿನ್ನಿಗೋಳಿ : ತುಳು ಭಾಷೆ ಕರಾವಳಿ ಸಂಸ್ಕೃತಿಗೆ ಪೂರಕ. ಭವಿಷ್ಯದಲ್ಲಿ ತುಳು ಭಾಷೆ, ಸಂಸ್ಕೃತಿ ಉಳಿಯಬೇಕು ಎಂದಾದರೆ ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವ ಪ್ರಕ್ರಿಯೆ ಎಂದರೆ ಮೊದಲು ಶಿಕ್ಷಣ ಸಂಸ್ಥೆಗಳಿಂದಲೇ ಆಗಬೇಕು. ಈ ಕಾರ್ಯಾಗಾರ ಮಾದರಿಯಾಗಿದೆ ಎಂದು ಜಾನಪದ ವಿದ್ವಾಂಸ, ಅಂಕಣಕಾರ ಡಾ. ಗಣೇಶ್ ಅಮಿನ್ ಸಂಕಮಾರ್ ಹೇಳಿದರು.

ಮೂಲ್ಕಿಯ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮೂಲ್ಕಿ ಯುವವಾಹಿನಿ ಮತ್ತು ಸಂಸ್ಥೆಯ ಎನ್‌ಎಸ್‌ಎಸ್ ಘಟಕ ಹಾಗೂ ರೋವರ್ಸ್‌ನ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ತುಳುನಾಡ ಸಂಸ್ಕೃತಿ ಮತ್ತು ಯುವಜನತೆ ಕಾರ್ಯಾಗಾರದಲ್ಲಿ ಮಾತನಾಡಿದರು.

ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಾಮಚಂದ್ರ ಟಿ.ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಪಡೆದಿರುವ ಕಲಾ ಸಂಘಟಕ ಮೂಲ್ಕಿ ಚಂದ್ರಶೇಖರ ಸುವರ್ಣ ಕಾರ್ಯಾಗಾರ ಉದ್ಘಾಟಿಸಿ ಇಂದಿನ ದಿನದಲ್ಲಿ ಮಕ್ಕಳನ್ನು ಹೆತ್ತವರೇ ಭಾಷೆ, ಸಂಸ್ಕೃತಿಯಿಂದ ದೂರಮಾಡುತ್ತಿದ್ದು ಮನೆಯೇ ಮೊದಲ ಪಾಠ ಶಾಲೆಯಾಗಬೇಕು ಅಲ್ಲಿಂದಲೇ ಸಂಸ್ಕಾರ ಶಿಸ್ತು ಬೆಳೆಯಬೇಕು ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಗಣೇಶ್ ಅಮಿನ್ ಸಂಕಮಾರ್ ಮತ್ತು ಮೂಲ್ಕಿ ಚಂದ್ರಶೇಖರ ಸುವರ್ಣ ಹಾಗೂ ಹಳೇ ವಿದ್ಯಾರ್ಥಿ ರಾಮಚಂದ್ರ ಟಿ.ಕೋಟ್ಯಾನ್‌ರನ್ನು ನಿಟ್ಟೆ ವಿದ್ಯಾ ಸಂಸ್ಥೆಯ ಪರವಾಗಿ ತರಬೇತಿ ಕೇಂದ್ರದ ಪ್ರಾಂಶುಪಾಲ ವೈ.ಎನ್.ಸಾಲ್ಯಾನ್ ಸನ್ಮಾನಿಸಿದರು.

ತರಬೇತಿ ಸಹ ಅಧಿಕಾರಿ ರಘುರಾಮ ರಾವ್, ರೋವರ್ಸ್ ಘಟಕದ ಮುಖ್ಯಸ್ಥರಾದ ಸುರೇಶ್, ಮೂಲ್ಕಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರಾಂಶುಪಾಲ ವೈ.ಎನ್.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು, ಉಷಾ ಕೆರೆಕಾಡು ವಂದಿಸಿ, ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ನವರಾತ್ರಿ ಉತ್ಸವಾಂಗ ಭರತ ನಾಟ್ಯ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ನವರಾತ್ರಿ ಉತ್ಸವಾಂಗದ ಪ್ರಯುಕ್ತ ಎರಡನೇ ದಿನದ ಸಾಂಸ್ಕ್ರತಿಕ  ಕಾರ್ಯಕ್ರಮ ಸರಸ್ವತಿ ಸಧನದಲ್ಲಿ ನಡೆಯಿತು. ಉಡುಪಿ "ಸೃಷ್ಟಿ " ನೃತ್ಯ ಕಲಾ ಕುಟೀರ ತಂಡದಿಂದ ಭರತ ನಾಟ್ಯ...

Close