ಹಳೆಯಂಗಡಿ ಲಯನ್ಸ್ ಕಾರ್ಯ ಶ್ಲಾಘನೀಯ

“ಹುಟ್ಟು ಅಕಸ್ಮಿಕ, ಸಾವು ನಿಶ್ಚಿತ. ಇಲ್ಲಿ ಎಲ್ಲರೂ ಸಮಾನರು. ಲೋಕಕ್ಕೆ ಪ್ರಯೋಜನವಾಗುವಂತಹ ಕಾರ್ಯಕ್ರಮಗಳನ್ನು ಲಯನ್ಸ್ ವತಿಯಿಂದ ಹಮ್ಮಿಕೊಳ್ಳಲು ಪ್ರಯತ್ನಿಸಿ”. ಸರಳ ರೀತಿಯಲ್ಲಿ ಪ್ರಚಾರ ರಹಿತವಾಗಿ ಅನುಷ್ಠಾನ ಮಾಡಿದ ಹಳೆಯಂಗಡಿ ಲಯನ್ಸ್ ಕ್ಲಬ್‌ನ ಕಾರ್ಯ ಶ್ಲಾಘನೀಯ ಎಂದು ಲಯನ್ಸ್ ಗವರ್ನರ್ ಎಂ.ಬಿ.ಸದಾಶಿವ್ ಎಂ.ಜೆ.ಫ್, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಳೆಯಂಗಡಿ ಲಯನ್ಸ್ ಕ್ಲಬ್, ದಾನಿಗಳ ಸಹಕಾರದಿಂದ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ರೂ. 1.85ಲಕ್ಷ ವೆಚ್ಚದಲ್ಲಿ ನೀಡಲಾದ ಸಿಲಿಕಾನ್ ಚೇಂಬರ್, ಮುಖ್ಯದ್ವಾರ ಮತ್ತು ನೀರಿನ ವ್ಯವಸ್ಥೆಯನ್ನು ಸ್ಥಳೀಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಪೂಜಾರಿಯವರಿಗೆ ಹಸ್ತಾಂತರ ಮಾಡಿದರು. ದಾನಿಗಳಾದ ಸುರೇಂದ್ರ ಎ. ಪೂಜಾರಿ, ಲಯನ್ ಭಾಸ್ಕರ್ ಸಾಲ್ಯಾನ್ ಸಾಯಿಕೃಪಾ, ಲಯನ್ ಪ್ರಕಾಶ್ ಶೆಟ್ಟಿ ಮತ್ತು ಲಯನ್ ಯಶೋಧರ ಸಾಲ್ಯಾನ್‌ರವರನ್ನು ಗೌರವಿಸಲಾಯಿತು.
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಮಂಗಳೂರು ಲಯನ್ ಪ್ರಾಂತ್ಯೀಯ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ತಾ.ಪಂ.ಸದಸ್ಯರಾದ ರಾಜುಕುಂದರ್, ಉದ್ಯಮಿ ಶಶೀಂದ್ರ ಎಂ.ಸಾಲ್ಯಾನ್, ಮಾಜಿ ಅಧ್ಯಕ್ಷ ಮಹಾಬಲ ಸಾಲ್ಯಾನ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪೂರ್ಣಿಮಾ ಮಧುಸೂಧನ್, ಸುಜಾತ ವಾಸುದೇವ್, ಅಬ್ದುಲ್ ಖಾದರ್, ಎಚ್.ಹಮೀದ್, ಬಶೀರ್ ಸಾಗ್, ನಾಗರಾಜ್, ಕಾಸಿಂ ಸಾಹೇಬ್, ಜಲಜ, ಪದ್ಮಾವತಿ ಶೆಟ್ಟಿ, ವನಿತಾ ರಮೇಶ್, ಜೀವನ್ ಪ್ರಕಾಶ್, ಸುರತ್ಕಲ್ ಲಯನ್ಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಲಯನ್ಸ್ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಲಯನ್ ಚಂದ್ರಶೇಖರ್ ನಾನಿಲ್, ಮಾಜಿ ಅಧ್ಯಕ್ಷ ಯಾದವ್ ದೇವಾಡಿಗ, ಕಾರ್ಯದರ್ಶಿ ಜಗದೀಶ್ ಬಾಳ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಶಾರದಮಹೋತ್ಸವ

 Prakash suvarna ಮುಲ್ಕಿ ಹಿಂದು ಯುವಸೇನೆ ವತಿಯಿಂದ  ಸಾರ್ವಜನಿಕ ಶಾರದಮಹೋತ್ಸವ 

Close